ನವದೆಹಲಿ: ಕೊರೊನಾ ವೈರಸ್ ಪರಿಣಾಮದಿಂದಾಗಿ ಚೀನಾದಿಂದ ಔಷಧಿ ತಯಾರಿಕಾ ಕಚ್ಚಾ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಭಾರತದ ಔಷಧಿ ತಯಾರಕ ರಂಗಕ್ಕೆ ಭಾರಿ ಹಿನ್ನಡೆಯುಂಟಾಗಿದೆ.

ಸದ್ಯ ಭಾರತದಲ್ಲಿ ಔಷಧಿಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ಪದಾರ್ಥಗಳ ದಾಸ್ತಾನು ಕೇವಲ ಎರಡರಿಂದ ಮೂರು ತಿಂಗಳಿಗಷ್ಟೇ ಸಾಕಾಗುತ್ತದೆ ಎಂದು ಭಾರತೀಯ ಔಷದೋದ್ಯಮ ಸಂಘ ತಿಳಿಸಿದೆ.

ಭಾರತದಲ್ಲಿ ಔಷಧಿ ತಯಾರಿಕೆಗೆ ಶೇ. 80ರಷ್ಟು ಕಚ್ಚಾ ಪದಾರ್ಥಗಳನ್ನು ಪೂರೈಕೆ ಮಾಡುವುದು ಚೀನಾ. ಆದರೆ, ಕೊರೊನಾ ವೈರಸ್ ಸೋಂಕು ಚೀನಾದಲ್ಲಿ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೈಗಾರಿಕೆಗಳು ಉತ್ಪಾದನ ನಿಲ್ಲಿಸಿವೆ. ಚೀನಾದಿಂದ ಭಾರತಕ್ಕೆ ಬರುವವರ ಮೇಲೂ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ಕಚ್ಚಾ ಪದಾರ್ಥಗಳು ಭಾರತಕ್ಕೆ ಪೂರೈಕೆಯಾಗುತ್ತಿಲ್ಲ. ಇದು ಔಷಧಿ ತಯಾರಿಕ ರಂಗದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಸಂಘ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.