ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಸಂಚಾರ ಬಂದ್ ಏ.14ವರೆಗೂ ವಿಸ್ತರಣೆ

Last Updated 26 ಮಾರ್ಚ್ 2020, 3:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಇರುವುದರಿಂದ ದೇಶದಾದ್ಯಂತ ರೈಲು ಸಂಚಾರವನ್ನು ಏಪ್ರಿಲ್ 14ರವರೆಗೂ ಸ್ಥಗಿತಗೊಳಿಸಿರುವುದಾಗಿ ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಬಂದ್ ಆಗಿರುವ ರೈಲು ಸಂಚಾರವನ್ನು ಏಪ್ರಿಲ್‌ ಮಧ್ಯಭಾಗದವರೆಗೂ ವಿಸ್ತರಣೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ ಬೆನ್ನಲೇ ರೈಲ್ವೆ ಇಲಾಖೆ ಈ ಪ್ರಕಟಣೆ ಹೊರಡಿಸಿದೆ.

ಸರಕು ಸಾಗಣೆಯ ಗೂಡ್ಸ್‌ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ, ಅವು ಎಂದಿನಂತೆ ಓಡಾಡಲಿವೆ, ಆದರೆ ಪ್ರಯಾಣಿಕ ಸೇವೆಯ ಎಲ್ಲಾ ರೈಲುಗಳು ಬಂದ್‌ ಆಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರು ರೈಲ್ವೆ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿದ್ದರೇ ಆ ಟಿಕೆಟ್‌ಗಳನ್ನು ರದ್ದು ಮಾಡುವ ಅವಶ್ಯಕತೆ ಇಲ್ಲ, ಟಿಕೆಟ್‌ ಹಣವನ್ನು ಬುಕಿಂಗ್‌ ಮಾಡಿದವರ ಖಾತೆಗೆ ಜಮೆ ಮಾಡಲಾಗುವುದು ಎಂದು ಐಆರ್‌ಸಿಟಿಸಿ ತಿಳಿಸಿದೆ.

ಮಾರ್ಚ್‌ 22ರ ಜನತಾ ಕರ್ಫ್ಯೂ ದಿನದಿಂದ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT