ಗುರುವಾರ , ಫೆಬ್ರವರಿ 20, 2020
29 °C
ರಾಹುಲ್ ಗಾಂಧಿ ಆಯ್ಕೆ ಮಾಡುವ ಮೂಲಕ ಕೇರಳದಿಂದ ಹಾನಿಕಾರಕ ಕೆಲಸ ಎಂದ ಇತಿಹಾಸಕಾರ

ಕಠಿಣ ಪರಿಶ್ರಮಿ ನರೇಂದ್ರ ಮೋದಿ ಎದುರು ರಾಹುಲ್‌ಗೆ ಅವಕಾಶವಿಲ್ಲ: ರಾಮಚಂದ್ರ ಗುಹಾ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಯಿಕ್ಕೋಡ್: ವಂಶ ರಾಜಕಾರಣದ ಐದನೇ ತಲೆಮಾರಿನ ನಾಯಕ ರಾಹುಲ್ ಗಾಂಧಿಗೆ ಕಠಿಣ ಪರಿಶ್ರಮಿ ನರೇಂದ್ರ ಮೋದಿ ಎದುರು ರಾಜಕಾರಣದಲ್ಲಿ ಅವಕಾಶವಿಲ್ಲ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ. ರಾಹುಲ್ ಅವರನ್ನು ಸಂಸತ್‌ಗೆ ಆಯ್ಕೆ ಮಾಡುವ ಮೂಲಕ ಕೇರಳವು ಹಾನಿಕಾರಕ ಕೆಲಸ ಮಾಡಿದೆ ಎಂದೂ ಅವರು ಹೇಳಿದ್ದಾರೆ.

ಕೇರಳ ಸಾಹಿತ್ಯ ಉತ್ಸವದ ಎರಡನೇ ದಿನವಾದ ಶುಕ್ರವಾರ ‘ದೇಶಪ್ರೇಮ ಮತ್ತು ತೀವ್ರಗಾಮಿ ದೇಶಭಕ್ತಿ’ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅದ್ಭುತ ಪಕ್ಷವಾಗಿದ್ದ ಕಾಂಗ್ರೆಸ್ ಈಗ ಒಂದು ಕುಟುಂಬ ಸಂಸ್ಥೆಯಾಗಿರುವುದು ಹಿಂದುತ್ವದ ಮತ್ತು ತೀವ್ರಗಾಮಿ ದೇಶಭಕ್ತಿಯ ಆರೋಹಣಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ. 

‘ವೈಯಕ್ತಿಕವಾಗಿ ನನಗೆ ರಾಹುಲ್ ಗಾಂಧಿ ಬಗ್ಗೆ ಯಾವುದೇ ವಿರೋಧವಿಲ್ಲ. ಅವರೊಬ್ಬ ಯೋಗ್ಯ ಮತ್ತು ಉತ್ತಮ ನಡತೆಯ ವ್ಯಕ್ತಿ. ಆದರೆ, ವಂಶ ರಾಜಕಾರಣದ ಐದನೇ ತಲೆಮಾರಿನ ನಾಯಕನನ್ನು ಯುವ ಭಾರತವು ಒಪ್ಪುತ್ತಿಲ್ಲ. ನೀವು ಮಲಯಾಳಿಗರು ರಾಹುಲ್ ಗಾಂಧಿಯನ್ನು ಸಂಸತ್‌ಗೆ ಆಯ್ಕೆ ಮಾಡುವ ತಪ್ಪನ್ನು 2024ರಲ್ಲಿಯೂ ಮಾಡಿದ್ದೇ ಆದಲ್ಲಿ ನರೇಂದ್ರ ಮೋದಿಯವರಿಗೆ ಅನುಕೂಲ ಮಾಡಿಕೊಟ್ಟಂತಾಗಲಿದೆ’ ಎಂದು ಗುಹಾ ಹೇಳಿದ್ದಾರೆ.

ಇದನ್ನೂ ಓದಿ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ; ಇತಿಹಾಸಕಾರ ರಾಮಚಂದ್ರ ಗುಹಾ ಬಂಧನ 

‘ಕೇರಳಿಗರಾದ ನೀವು ಅನೇಕ ಅದ್ಭುತ ಕೆಲಸಗಳನ್ನು ಮಾಡಿದ್ದೀರಿ. ಆದರೆ ರಾಹುಲ್ ಗಾಂಧಿ ಅವರನ್ನು ಸಂಸತ್‌ಗೆ ಆರಿಸಿ ಕಳುಹಿಸುವ ಮೂಲಕ ಹಾನಿಕಾರಕ ಕೆಲಸ ಮಾಡಿದ್ದೀರಿ’ ಎಂದು ಅವರು ಹೇಳಿದ್ದಾರೆ.

ಮೋದಿ ಕಠಿಣ ಪರಿಶ್ರಮಿ: ‘ನರೇಂದ್ರ ಮೋದಿ ಅವರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅವರು ರಾಹುಲ್ ಗಾಂಧಿಯಂತಲ್ಲ. ಅವರು ಸ್ವಯಂ ವರ್ಚಸ್ಸು ಬೆಳೆಸಿಕೊಂಡವರು. 15 ವರ್ಷ ರಾಜ್ಯದ ಆಡಳಿತ ನಡೆಸಿದ ಅನುಭವ ಉಳ್ಳವರು. ಅವರು ಕಠಿಣ ಪರಿಶ್ರಮಿ ಮಾತ್ರವಲ್ಲದೆ ರಜೆ ಪಡೆದು ಯುರೋಪ್‌ಗೆ ಹೋಗುವವರಲ್ಲ. ನನ್ನನ್ನು ನಂಬಿ. ಇದಾವುದನ್ನೂ ನಾನು ತಮಾಷೆಗೆ ಹೇಳುತ್ತಿಲ್ಲ’ ಎಂದೂ ಗುಹಾ ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು