ಬುಧವಾರ, ಜನವರಿ 27, 2021
24 °C

ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆಗೆ ಸ್ಥಳೀಯ ರಾಜಕೀಯ ದ್ವೇಷವೇ ಕಾರಣ 

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಅಮೇಠಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದ ಸ್ಮೃತಿ ಇರಾನಿ ಬೆಂಬಲಿಗ ಸುರೇಂದ್ರ ಸಿಂಗ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಸೋಮವಾರ ಮಾಹಿತಿ ನೀಡಿರುವ ಪೊಲೀಸರು, ‘ಸ್ಥಳೀಯ ರಾಜಕೀಯ ವೈಷಮ್ಯವೇ ಹತ್ಯೆಗೆ ಕಾರಣ,’ ಎಂದು ತಿಳಿಸಿದ್ದಾರೆ. 

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದೇವೆ. ಇನ್ನಿಬ್ಬರು ಶಂಕಿತರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಅತಿಶೀಘ್ರದಲ್ಲೇ ಬಂಧಿಸುತ್ತೇವೆ. ಮೃತ ವ್ಯಕ್ತಿ ಮತ್ತು ಐವರು ಹಂಕತರ ನಡುವೆ ಸ್ಥಳೀಯ ಮಟ್ಟದ ರಾಜಕೀಯ ಧ್ವೇಷವಿತ್ತು ಎಂಬುದು ಪ್ರಕರಣದ ತನಿಖೆ ವೇಳೆ ನಮಗೆ ತಿಳಿದು ಬಂದಿದೆ,’ ಎಂದು ಉತ್ತರ ಪ್ರದೇಶದ ಪೊಲೀಸ್‌ ಆಯುಕ್ತ ಒ.ಪಿ ಸಿಂಗ್‌ ತಿಳಿಸಿದ್ದಾರೆ. 

ಸ್ಮೃತಿ ಇರಾನಿ ಅವರ ಬೆಂಬಲಿಗ, ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್‌ ಮೇಲೆ ಭಾನುವಾರ ಬೆಳಗ್ಗೆ 3 ಗಂಟೆ ಸುಮಾರಿನಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಆಸ್ಪತ್ರೆಗೆ ಸೇರಿಸುವ ಮಾರ್ಗ ಮದ್ಯೆ ಸುರೇಂದ್ರ ಸಿಂಗ್‌ ಅಸುನೀಗಿದ್ದರು. ಇದು ಅಮೇಠಿ ಮಟ್ಟಿಗೆ ರಾಜಕೀಯ ಸ್ವರೂಪ ಪಡೆದುಕೊಂಡಿತು. 

ಆರೋಪಿಗಳು ಮತ್ತು ಅವರ ಹಿಂದೆ ಇರುವವರಿಗೆ ಮರಣದಂಡನೆ ಶಿಕ್ಷೆ ಕೊಡಿಸಲು ನಾನು ಸುಪ್ರೀಂ ಕೋರ್ಟ್‌ ವರೆಗೆ ನ್ಯಾಯಾಂಗ ಹೋರಾಟ ನಡೆಸುತ್ತೇನೆ ಎಂದು ಸ್ಮೃತಿ ಇರಾನಿ ಅವರು ಸುರೇಂದ್ರ ಸಿಂಗ್‌ ಅಂತ್ಯ ಸಂಸ್ಕಾರದ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು