ಭಾನುವಾರ, ಜೂನ್ 20, 2021
28 °C

ಮಹಾರಾಷ್ಟ್ರದ ನಾಗ್ಪುರ ತಲುಪಿದ ಮಿಡತೆಗಳು: ಡ್ರೋನ್‌ ಮೂಲಕ ಕೀಟನಾಶಕ ಸಿಂಪಡಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗ್ಪುರ: ಮಧ್ಯಪ್ರದೇಶ –ಮಹಾರಾಷ್ಟ್ರ ಗಡಿಯ ಪೆಂಚ್ ಹುಲಿ ಸಂರಕ್ಷಿತಾರಣ್ಯದಿಂದ ಮಿಡತೆಗಳ ಸೈನ್ಯವು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಅಜ್ನಿ ಗ್ರಾಮಕ್ಕೆ ದಾಳಿಯಿಟ್ಟಿವೆ. ಹೀಗಾಗಿ  ಬೆಳೆಗಳು ಮತ್ತು ಗಿಡ–ಮರಗಳ ಮೇಲೆ ಡ್ರೋನ್‌ಗಳಿಂದ ಕೀಟನಾಶಕ ಸಿಂಪಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಿಡತೆಗಳ ದಾಳಿಯಿಂದ ಇಲ್ಲಿಯವರೆಗೆ ಬೆಳೆ ಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. 

ಪೆಂಚ್‌ ಹುಲಿಧಾಮದಲ್ಲಿ ಮಂಗಳವಾರ ಮಿಡತೆಗಳ ಹಿಂಡು ಕಾಣಿಸಿಕೊಂಡಿತ್ತು. ಇದು ಸಂರಕ್ಷಿತ ಪ್ರದೇಶವಾದ್ದರಿಂದ ಕೀಟನಾಶಕಗಳನ್ನು ಸಿಂಪಡಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. 

ಸಣ್ಣ ಕೊಂಬಿನ ಈ ಮಿಡತೆಗಳು ಬಳಿಕ ಹಿಂಡು ಹಿಂಡಾಗಿ ಅಜ್ನಿ ಗ್ರಾಮಕ್ಕೆ ದಾಳಿಯಿಟ್ಟಿವೆ.  ಅಲ್ಲಿನ ಮರಗಳು ಮತ್ತು ಬೆಳೆಗಳ ಮೇಲೆ ಡ್ರೋನ್‌ಗಳ ನೆರವಿನಿಂದ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ ಎಂದು ಕೃಷಿ ವಿಭಾಗದ ಜಂಟಿ ನಿರ್ದೇಶಕ ರವಿ ಭೋಸ್ಲೆ ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಇನ್ನೂ ಬತ್ತವನ್ನು ನಾಟಿ ಮಾಡಿಲ್ಲ. ಹೀಗಾಗಿ ಬೆಳೆಗಳಿಗೆ ಯಾವುದೇ ಹಾನಿ ಆಗಿಲ್ಲ. ಮಿಡತೆಗಳ ಹಿಂಡು ಜಿಲ್ಲೆಯ ಮೌಡಾ ತಹಸಿಲ್ ಕಡೆಗೆ ನುಗ್ಗಿವೆ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು