ಬುಧವಾರ, ಸೆಪ್ಟೆಂಬರ್ 22, 2021
25 °C

ಕುಮಾರಸ್ವಾಮಿ ‘ಕಣ್ಣೀರು’ ಹಾಕಿದ್ದು ದೇಶವೇ ನೋಡಿದೆ: ಸಂಸತ್‌ನಲ್ಲಿ ರಾಕೇಶ್‌ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸತ್‌ನಲ್ಲಿ ಅವಿಶ್ವಾಸ ಮತದ ಮೇಲೆ ನಡೆಯುತ್ತಿರುವ ಚರ್ಚೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ‘ಕಣ್ಣೀರು’ ವಿಷಯ ಪ್ರಸ್ತಾಪವಾಗಿ, ಪ್ರತಿಧ್ವನಿಸಿತು.

ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ, ಪ್ರತಿಕ್ರಿಯಿಸಿ ಮಾತನಾಡಿದ ಬಿಜೆಪಿ ಸಂಸದ ರಾಕೇಶ್‌ ಸಿಂಗ್‌, ‘ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ. ಕಣ್ಣೀರು ಹಾಕಿದ್ದನ್ನು ಇಡೀ ದೇಶವೇ ನೋಡಿದೆ’ ಎಂದು ಪ್ರಸ್ತಾಪಿಸಿದರು. 

‘ಒಂದು ಕುಟುಂಬದ ಸರ್ಕಾರಕ್ಕೆ ಮಾತ್ರ ಕಾಂಗ್ರೆಸ್ ಬೆಂಬಲ ನೀಡಿದೆ. ಜೆಡಿಎಸ್‌ ಜತೆಗೂಡಿ ಇನ್ನೆಷ್ಟು ಪಕ್ಷಗಳು ವಿಷ ಕುಡಿಯಬೇಕು?’ ಎಂದು ರಾಕೇಶ್‌ ಸಿಂಗ್‌ ಎಂದು ಕುಟುಕಿದರು.

ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನಡೆದ ಸಭಾ ಕಾರ್ಯಕ್ರಮವೊಂದರಲ್ಲಿ ತಮ್ಮ ಅಂತರಾಳದ ನೋವನ್ನು ತೋಡಿಕೊಂಡು ಕಣ್ಣೀರು ಹಾಕಿದ್ದರು.

ಸಿಎಂ ಕಣ್ಣೀರು ಮೈತ್ರಿ ಪಕ್ಷ ಕಾಂಗ್ರೆಸ್‌ ನೀಡುತ್ತಿರುವ ಅಸಹಕಾರದ್ದು ಎಂದು ವಿಪಕ್ಷಗಳು ಬಣ್ಣಿಸಿದ್ದವು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು