ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಸಿದ ಗುಂಪು ಹಲ್ಲೆ

Last Updated 12 ಆಗಸ್ಟ್ 2019, 19:04 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಗುಂಪು ಹಲ್ಲೆಗಳು ಮರುಕಳಿಸಿದ್ದು, ಒಬ್ಬ ಯುವಕ ಮೃತಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರ ಕಳುಹಿಸಿದ್ದನ್ನು ಒಪ್ಪಿಕೊಂಡಿಲ್ಲ ಎಂದು ಆರೋಪಿಸಿ ಸಲೀಂ ಅಹಮದ್ (20) ಎಂಬವರನ್ನು ಬಿಜ್ನೋರ್ ಜಿಲ್ಲೆಯಲ್ಲಿ ಹೊಡೆದು ಸಾಯಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಇಟಾವಾ ಜಿಲ್ಲೆಯಲ್ಲಿ ಮಕ್ಕಳಕಳ್ಳ ಎಂಬ ಸಂದೇಹದ ಮೇಲೆ ಯುವಕನ್ನು ಬೆತ್ತಲೆಗೊಳಿಸಿ,ಕೈಕಾಲು ಕಟ್ಟಿಹಾಕಿ ಹಲ್ಲೆ ನಡೆಸಲಾಗಿದೆ. ಜನರ ಗುಂಪು ಯುವಕನನ್ನು ಥಳಿಸುತ್ತಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಮಕ್ಕಳ ಕಳ್ಳತನ ಆರೋಪದಲ್ಲಿ ಮಥುರಾ ಪಟ್ಟಣದಲ್ಲಿ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ.

ಕಳ್ಳನೆಂದು ಭಾವಿಸಿ 25 ವರ್ಷದ ಸೋನು ಎಂಬಾತನನ್ನುಅಲಿಗಡ ಪಟ್ಟಣದಲ್ಲಿ ಥಳಿಸಲಾಗಿದೆ. ಕೆಲ ದಿನಗಳ ಹಿಂದೆ ರಾತ್ರಿವೇಳೆ ಬಾಲ್ಕನಿಯಿಂದ ಆಯತಪ್ಪಿ ಪಕ್ಕದ ಮನೆಯ ಮಾಳಿಗೆ ಮೇಲೆ ಬಿದ್ದಿದ್ದ ಸೋನುಗೆ ಸ್ಥಳೀಯರು ಥಳಿಸಿದ್ದರು. ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಫಿರೋಜಾಬಾದ್‌ನಲ್ಲಿ ಇತ್ತೀಚೆಗೆ ಗುಂಪು ಹಲ್ಲೆ ಘಟನೆ ಬೆಳಕಿಗೆ ಬಂದ ಇಂತಹ ಬಳಿಕ ಇನ್ನಷ್ಟು ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT