ಶನಿವಾರ, ಜನವರಿ 25, 2020
28 °C

ಕುಡಿದ ಅಮಲಿನಲ್ಲಿ 8 ವರ್ಷದ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಚೋದಿತ ಸ್ಥಿತಿಯಲ್ಲಿದ್ದ ತಂದೆ 8 ವರ್ಷದ ತನ್ನ ಪುತ್ರಿ ಮೇಲೆಯೇ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಪಟ್ಟಣದಲ್ಲಿ ನಡೆದಿದೆ.

ಮಕ್ಕಳ ಸಹಾಯವಾಣಿ ಸೇವೆಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ದೂರು ಸಲ್ಲಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಸಂಜೆಯ ಸಮಯದಲ್ಲಿ ಕುಡಿದ ಸ್ಥಿತಿಯಲ್ಲಿರುವ ವ್ಯಕ್ತಿ ಪ್ರತಿದಿನ ತನ್ನ ಮಗಳನ್ನು ಹೊಡೆಯುತ್ತಾನೆ ಎಂದು ಕರೆ ಮಾಡಿದವರು ನಮಗೆ ತಿಳಿಸಿದರು. ಬಳಿಕ ಅಧಿಕಾರಿಗಳು ಸಂತ್ರಸ್ತೆಯನ್ನು ಹುಡುಕಲು ಮುಂದಾದಾಗ ಅದಾದ ಎರಡು ದಿನಗಳ ಬಳಿಕ ಸಂತ್ರಸ್ತೆಯನ್ನು ಆಕೆಯ ನಿವಾಸದಲ್ಲಿ ಪತ್ತೆಹಚ್ಚಿದ್ದಾರೆ ಎಂದು ಪೊಲೀಸ್ ಮುಖ್ಯ ಸೂಪರಿಂಟೆಂಡೆಂಟ್ ರಾಕೇಶ್ ಮೋಹನ್ ಶುಕ್ಲಾ ತಿಳಿಸಿದ್ದಾರೆ. 

ಬಾಲಕಿಯು ನಡೆದಿದ್ದನ್ನೆಲ್ಲ ಮಕ್ಕಳ ಸಮಾಲೋಚಕರ ಬಳಿ ಹೇಳಿಕೊಂಡಿದ್ದು, ಅವರು ಪೊಲೀಸರಿಗೆ ವಿಚಾರವನ್ನು ತಿಳಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಅತ್ಯಾಚಾರವಾಗಿರುವುದು ತಿಳಿದುಬಂದಿದೆ. 

ಕಾರ್ಮಿಕನಾಗಿರುವ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತ ತನಿಖೆಗೆ ನ್ಯಾಯಾಧೀಶರು ವಿಶೇಷ ತನಿಖಾ ತಂಡವನ್ನು ನೇಮಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು