ಮಂಗಳವಾರ, ಜೂನ್ 2, 2020
27 °C

ಏಪ್ರಿಲ್ ಫೂಲ್ ನೆಪದಲ್ಲಿ ಕೊರೊನಾ ವದಂತಿ ಹಬ್ಬಿಸಿದರೆ ಕ್ರಮ: ಮಹಾರಾಷ್ಟ್ರ ಪೊಲೀಸ್

ಪಿಟಿಐ Updated:

ಅಕ್ಷರ ಗಾತ್ರ : | |

Maharashtra police

ಮುಂಬೈ:ಏಪ್ರಿಲ್ ಫೂಲ್ ನೆಪದಲ್ಲಿ ಸಾಮಾಜಿಕ ತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ವದಂತಿ ಅಥವಾ ತಮಾಷೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ರೀತಿಯ ವದಂತಿಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದರೆ ಸಂದೇಶ ಕಳುಹಿಸಿದ ವ್ಯಕ್ತಿ, ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಉಪ ಆಯುಕ್ತ  ಮೀನಾ ಮಕ್ವಾನಾ ಹೇಳಿದ್ದಾರೆ.

ಏಪ್ರಿಲ್ 1ರಂದು ಹಲವಾರು ಜನ ತಮ್ಮ ಸಂಬಂಧಿಕರು, ಸ್ನೇಹಿತರನ್ನು ಮೂರ್ಖರನ್ನಾಗಿ ಮಾಡುವ ಆಟವಾಡುತ್ತಾರೆ. ಯಾರೊಬ್ಬರೂ ಕೊರೊನಾವೈರಸ್‌ಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಮಾಷೆ ಮಾಡಬೇಡಿ. ಇಂಥಾ ಸಂದೇಶಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ. ಈ ರೀತಿಯ ಸಂದೇಶಗಳು ವಾಟ್ಸ್‌ಆ್ಯಪ್‌ನಲ್ಲಿ ಕಂಡು ಬಂದರೆ ಗ್ರೂಪ್ ಅಡ್ಮಿನ್ ಮತ್ತು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಗ್ರೂಪ್ ಅಡ್ಮಿನ್‌ಗಳು ಸಂದೇಶ ಕಳುಹಿಸುವ ಸೆಟ್ಟಿಂಗ್ಸ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ ಎಂದು ಮೀನಾ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು