ಭಾನುವಾರ, ಮಾರ್ಚ್ 7, 2021
28 °C

'ದೀದಿ ದೆಹಲಿ ಮೇಲೆ ಕಣ್ಣಿಟ್ಟಿದ್ದು, ಬಂಗಾಳವನ್ನು ದಲ್ಲಾಳಿಗಳಿಗೆ ನೀಡಿದ್ದಾರೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ನಾಯಕತ್ವ ಮುನ್ನಡೆಸಲು ಕಣ್ಣಿಟ್ಟಿದ್ದು ಪಶ್ಚಿಮ ಬಂಗಾಳವನ್ನು ದಲ್ಲಾಳಿಗಳಿಗೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

 ಉತ್ತರ ಬಂಗಾಳದ ಜಲ್‌ಪೈಗುರಿ ಎಂಬಲ್ಲಿ ಶುಕ್ರವಾರ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ,  ಬಂಗಾಳದಲ್ಲಿ ಟಿಎಂಸಿ ಸರ್ಕಾರವಿದ್ದರೂ ದಲ್ಲಾಳಿಗಳು ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೆಹಲಿಗೆ ಬರುವುದರ ಬಗ್ಗೆಯೇ ದೀದಿ ಚಿಂತೆ ಮಾಡುತ್ತಿದ್ದಾರೆ. ಹಾಗಾಗಿ ಆಕೆ ಪಶ್ಚಿಮ ಬಂಗಾಳವನ್ನು ಬಿಟ್ಟು ಬಿಟ್ಟಿದ್ದಾರೆ. ಅಲ್ಲಿರುವ ಬಡವರು, ಮಧ್ಯಮ ವರ್ಗದವರನ್ನು ಮಧ್ಯವರ್ತಿಗಳ ಮತ್ತು ಅಧಿಕಾರಯುಕ್ತರ ಗುಂಪು ಲೂಟಿ ಮಾಡುತ್ತಿದೆ.

ಪಶ್ಚಿಮ ಬಂಗಾಳದಲ್ಲಿನ ಈಗಿನ ಪರಿಸ್ಥಿತಿ ಹೇಗಿದೆ ಅಂದರೆ ದೀದಿ ಅಲ್ಲಿನ ಮುಖ್ಯಮಂತ್ರಿ ಆಗಿದ್ದರೂ ಇನ್ನು ಯಾರೋ ಒಬ್ಬರು ದಾದಾಗಿರಿ ಮಾಡುತ್ತಿದ್ದಾರೆ.ಟಿಎಂಸಿ ಅಧಿಕಾರದಲ್ಲಿದ್ದರೂ ದಲ್ಲಾಳಿಗಳು ಆಡಳಿತ ನಡೆಸುತ್ತಿದ್ದಾರೆ ಎಂದಿದ್ದಾರೆ ಮೋದಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು