ಸೋಮವಾರ, ಅಕ್ಟೋಬರ್ 21, 2019
26 °C

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ಗೆ ಚಿನ್ನದ ನೇಯ್ಗೆಯ ಶಾಲು ಉಡುಗೊರೆ ನೀಡಿದ ಮೋದಿ

Published:
Updated:

ಕೊಯಂಬತ್ತೂರು: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಚಿತ್ರವಿರುವ, ಕೈಯಿಂದ ನೇಯ್ದ ಒಂದು ರೇಷ್ಮೆ ಶಾಲನ್ನು ಮೋದಿ ಅವರು ಚೀನಾದ ಅಧ್ಯಕ್ಷರಿಗೆ ಶನಿವಾರ ಉಡುಗೊರೆಯಾಗಿ ನೀಡಿದರು. ಈ ಶಾಲನ್ನು ವಸ್ತ್ರ ವಿನ್ಯಾಸಕ ಎಂ ಧರ್ಮರಾಜ್ ಅವರು ವಿನ್ಯಾಸಗೊಳಿಸಿದ್ದರೆ, ಎ. ಷಣ್ಮುಗಸುಂದರಂ ಹಾಗೂ ಈ. ಮನೋಜ್‌ ಕುಮಾರ್‌ ಅವರು ನೇಯ್ದಿದ್ದಾರೆ.

ಚಿನ್ನದ ನೇಯ್ಗೆಯ ಈ ಶಾಲ್‌ನ ಎರಡೂ ಅಂಚುಗಳಲ್ಲಿ ಹೂವಿನ ಚಿತ್ರಗಳನ್ನು ರಚಿಸಲಾಗಿದ್ದು ಇದನ್ನು ತಯಾರಿಸಲು 15 ದಿನಗಳು ತಗುಲಿವೆ. ಕೆಂಪು ಬಣ್ಣದ ಈ ಶಾಲನ್ನು ಶುದ್ಧ ಮಲ್ಬರಿ ರೇಷ್ಮೆಯಿಂದ ತಯಾರಿಸಲಾಗಿದೆ.

Post Comments (+)