ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ದಿನ ವಿಳಂಬ; ಜೂನ್ 5ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Last Updated 15 ಮೇ 2020, 11:26 IST
ಅಕ್ಷರ ಗಾತ್ರ

ನವದೆಹಲಿ: ನೈರುತ್ಯ ಮುಂಗಾರು ಜೂನ್ 5ಕ್ಕೆ ಕೇರಳಕ್ಕೆ ತಲುಪಲಿದ್ದು ನಿಗದಿತ ವೇಳೆಗಿಂತ ನಾಲ್ಕು ದಿನ ವಿಳಂಬವಾಗಿ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಕೇರಳದಲ್ಲಿ ಜೂನ್‌ನಿಂದಸೆಪ್ಟೆಂಬರ್‌ವರೆಗೆ 4 ತಿಂಗಳು ಕಾಲ ಮಳೆ ಮುಂದುವರಿಯಲಿದೆ. ಸಾಮಾನ್ಯವಾಗಿಜೂನ್ 1ಕ್ಕೆ ಕೇರಳಕ್ಕೆ ತಲುಪುತ್ತಿತ್ತು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಮೇ 16ರಂದು ಮುಂಗಾರು ತಲುಪಲಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾರಣ ಮೇ.22ಕ್ಕೆ ಬರಬೇಕಿದ್ದ ಮುಂಗಾರು 6 ದಿನ ಮುಂಚಿತವಾಗಿ ಇಲ್ಲಿ ತಲುಪಲಿದೆ.

ಕಳೆದ ವರ್ಷ ಮೇ.18ರಂದು ಮುಂಗಾರು ಅಂಡಮಾನ್ ಮತ್ತು ನಿಕೋಬಾರ್‌ಗೆ ತಲುಪಿತ್ತು. 20ನೇ ತಾರೀಕಿಗೆ ಬರಬೇಕಿದ್ದ ಮುಂಗಾರು 2 ದಿನಕ್ಕೆ ಮುಂಚಿತವಾಗಿ ಬಂದಿತ್ತು. ಕೇರಳದ್ಲಲಿ ಜೂನ್ 8ಕ್ಕೆ ಮುಂಗಾರು ಮಳೆಯಾಗಿದ್ದು ದೇಶದಾದ್ಯಂತ ಜುಲೈ 19ಕ್ಕೆ ಮಳೆ ಬಂದಿತ್ತು.ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈ ವರ್ಷ ಮುಂಗಾರು ಸಾಧಾರಣ ರೀತಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT