ಶುಕ್ರವಾರ, ಜೂನ್ 5, 2020
27 °C
ರಾಜೀವ್ ಕುಮಾರ್ ವಿಚಾರಣೆಗೆ ಹಾಜರಾಗಲಿ

ಸುಪ್ರೀಂ ಆದೇಶ ’ನೈತಿಕ ಗೆಲುವು’– ಮಮತಾ, ’ಸಿಬಿಐನ ನೈತಿಕ ಗೆಲುವು’–ಕೇಂದ್ರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ/ನವದೆಹಲಿ: ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಬಹುದು ಆದರೆ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ’ನೈತಿಕ ಗೆಲುವು’ ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡರೆ, ಕೇಂದ್ರ ಸರ್ಕಾರವೂ ಸಹ ಇದು ಸಿಬಿಐಗೆ ದೊರೆತ ನೈತಿಕ ಗೆಲುವು ಎಂದಿದೆ. 

ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಮಮತಾ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದ ವಿಚಾರಣೆಗೆ ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ಜತೆ ಸಹಕರಿಸಬೇಕೆಂದೂ ಮಂಗಳವಾರ ಸುಪ್ರೀಂಕೋರ್ಟ್ ಆದೇಶಿಸಿದೆ. ಇದು ’ಸಿಬಿಐನ ನೈತಿಕ ಗೆಲುವು’ ಎಂದು ಹೇಳಿಕೊಂಡಿದೆ. ಫೆ.20ರಂದು ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ತನಿಖಾ ಸಂಸ್ಥೆಗೆ ರಾಜೀವ್‌ ಕುಮಾರ್‌ ಹಾಜರಾಗಬೇಕಿದೆ. 

ಬೆಂಗಾಲದ ಶಾರದಾ ಚಿಟ್ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಲ್ಲಿಸಬೇಕು ಹಾಗೂ ತನಿಖೆಯಲ್ಲಿ ರಾಜೀವ್‌ ಕುಮಾರ್‌ ಸಹಕರಿಸಬೇಕಿದೆ. ಭಾನುವಾರ ಸಿಬಿಐ ರಾಜೀವ್‌ ಅವರನ್ನು ಬಂಧಿಸಲು ಬಂದ ನಂತರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಜಟಾಪಟಿ ತಾರಕ್ಕೇರಿತು. ಸಿಬಿಐ ಅಧಿಕಾರಿಗಳ ತಂಡವನ್ನು ಕೋಲ್ಕತ್ತ ಪೊಲೀಸರು ಕೆಲವು ಗಂಟೆಗಳ ವರೆಗೂ ವಶಕ್ಕೆ ಪಡೆದಿದ್ದರು. 

 * ’ಪ್ರಜೆಗಳು ಮಾತ್ರವೇ ಈ ದೇಶದ ದೊರೆ, ಬೇರೆ ಯಾರೂ ಅಲ್ಲ...ಪ್ರಜಾಪ್ರಭುತ್ವ ಮಾತ್ರವೇ ದೇಶದ ಒಡೆಯ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದು ಕೇವಲ ನನ್ನ ಗೆಲುವು ಅಲ್ಲ. ಸಂವಿಧಾನದ ಗೆಲುವು ಎಂದಿದ್ದಾರೆ.

* ಶಾರದಾ ಮತ್ತು ರೋಸ್‌ ವ್ಯಾಲಿ ಚಿಟ್ ಫಂಡ್‌ ಹಗರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ನೇತೃತ್ವವನ್ನು ರಾಜೀವ್ ಕುಮಾರ್‌ ವಹಿಸಿದ್ದರು. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಹಗರಣದಲ್ಲಿ ಭಾಗಿಯಾಗಿದ್ದು, ಅವರನ್ನು ರಕ್ಷಿಸಿ ಸಾಕ್ಷ್ಯನಾಶ ಮಾಡಲಾಗಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

* ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌, ಚಂದ್ರಬಾಬು ನಾಯ್ಡು, ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್‌ ಸೇರಿ ಬಿಜೆಪಿಯ ವಿರೋಧ ಪಕ್ಷಗಳ ಹಲವು ಮುಖಂಡ ಮಮತಾ ಅವರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಇವನ್ನೂ ಓದಿ

ಮೋದಿ ಮತ್ತೊಮ್ಮೆ ಅಧಿಕಾರಕ್ಕೇರುವುದಿಲ್ಲ: ಮಮತಾ ಬ್ಯಾನರ್ಜಿ

ಕೋಲ್ಕತ್ತ ಪೊಲೀಸ್ ಆಯುಕ್ತರನ್ನು ವಿಚಾರಣೆ ಮಾಡಬಹುದು, ಬಂಧಿಸುವಂತಿಲ್ಲ: ಸುಪ್ರೀಂ

ಬ್ಯಾನರ್ಜಿಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಮುಖ್ಯಮಂತ್ರಿಗಳಿವರು

ಮಮತಾ ಬ್ಯಾನರ್ಜಿ ಆಪ್ತ, ಯಾರು ಈ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್?

ಮೋದಿ ವಿರುದ್ಧ ದೀದಿ ಸಡ್ಡು; ಧರಣಿ ಸ್ಥಳದಲ್ಲೇ ಸಂಪುಟ ಸಭೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು