ಬಾಂಬ್ ಬೆದರಿಕೆ: ಮುಂಬೈ–ಲಖನೌ ಮಾರ್ಗದ ಇಂಡಿಗೊ ವಿಮಾನ ತಪಾಸಣೆ

7

ಬಾಂಬ್ ಬೆದರಿಕೆ: ಮುಂಬೈ–ಲಖನೌ ಮಾರ್ಗದ ಇಂಡಿಗೊ ವಿಮಾನ ತಪಾಸಣೆ

Published:
Updated:
Deccan Herald

ಮುಂಬೈ: ಬಾಂಬ್ ಇದೆ ಎಂಬ ಮಾಹಿತಿ ಬಂದ ಕಾರಣ ಮುಂಬೈ–ಲಖನೌ ಮಾರ್ಗದ ಇಂಡಿಗೊ ವಿಮಾನವನ್ನು ಶನಿವಾರ ಇಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ವಿಮಾನ ಸುರಕ್ಷಿತವಾಗಿದೆ ಎಂದು ಭದ್ರತಾ ಅಧಿಕಾರಿಗಳು ಘೋಷಿಸಿದರು. ಒಂದು ಗಂಟೆ ವಿಳಂಬದ ಬಳಿಕ ವಿಮಾನ ಹಾರಾಟ ನಡೆಸಿತು. 

169 ಪ್ರಯಾಣಿಕರನ್ನು ಹೊತ್ತ ವಿಮಾನವು ದೆಹಲಿ ಮಾರ್ಗವಾಗಿ ಬೆಳಗ್ಗೆ 6.05ಕ್ಕೆ ಹೊರಡಲು ನಿಗದಿಯಾಗಿತ್ತು. 

‘6ಇ 3612 ಸಂಖ್ಯೆಯ ಇಂಡಿಗೊ ವಿಮಾನದಲ್ಲಿ ಬಾಂಬ್ ಇದೆ ಎಂಬುದಾಗಿ ಗೋ ಏರ್ ಖಾಸಗಿ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರು ಶಂಕೆ ವ್ಯಕ್ತಪಡಿಸಿದರು. ತಕ್ಷಣ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು. ಭದ್ರತಾ ಸಿಬ್ಬಂದಿ ವಿಮಾನವನ್ನು ತಪಾಸಣೆ ನಡೆಸಿದರು’ ಎಂದು ಇಂಡಿಗೊ ವಕ್ತಾರರು ತಿಳಿಸಿದ್ದಾರೆ.

ತಮ್ಮ ಶಂಕೆಗೆ ಪುಷ್ಠಿ ನೀಡುವ ಕೆಲವು ಫೋಟೊಗಳನ್ನೂ ತೋರಿಸಿದ ಅವರು, ಅದರಲ್ಲಿರುವ ವ್ಯಕ್ತಿಗಳು ದೇಶಕ್ಕೆ ಅಪಾಯಕಾರಿ ಎಂದು ಮಹಿಳೆ ಹೇಳಿಕೊಂಡಿದ್ದರು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯು ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದರು. ಶಂಕೆ ವ್ಯಕ್ತಪಡಿಸಿದ ಮಹಿಳೆಯು ಮಾನಸಿಕ ಅಸ್ವಸ್ಥರಂತೆ ಕಂಡುಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬೇರೊಂದು ನಿಲ್ದಾಣಕ್ಕೆ ವಿಮಾನವನ್ನು ಕೊಂಡೊಯ್ದು ತಪಾಸಣೆ ನಡೆಸಲಾಯಿತು. ವಿಮಾನ ಸರಕ್ಷಿತವಾಗಿದೆ ಎಂಬುದು ಖಚಿತವಾದ ಬಳಿಕ ಕಾರ್ಯಾಚರಣೆ ಪುನರ್ ಆರಂಭಿಸಲಾಯಿತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !