ಬುಧವಾರ, ಸೆಪ್ಟೆಂಬರ್ 22, 2021
25 °C

ಕಾಂಗ್ರೆಸ್‌ ಜತೆ ತಂದೆಗೆ ಉತ್ತಮ ಸ್ನೇಹವಿತ್ತು: ಭೂಗತ ದೊರೆ ಹಾಜಿ ಮಸ್ತಾನ್‌ ಪುತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕಾಂಗ್ರೆಸ್‌ ಮುಖಂಡರು ಮತ್ತು ಶಿವಸೇನಾ ಸಂಸ್ಥಾಪಕ ಬಾಳ ಠಾಕ್ರೆಯೊಂದಿಗೆ ನನ್ನ ತಂದೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಮುಂಬೈನ ಭೂಗತ ದೊರೆಯಾಗಿದ್ದ ಹಾಜಿ ಮಸ್ತಾನ್‌ ಅವರ ಮಗ ಸುಂದರ್‌ ಶೇಖರ್‌ ತಿಳಿಸಿದರು.

ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್‌ನೊಂದಿಗೆ ನನ್ನ ತಂದೆಗೆ ಉತ್ತಮ ಸಂಬಂಧವಿತ್ತು’ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

‘ನನ್ನ ತಂದೆಯು ಬಾಳ ಠಾಕ್ರೆ ಸೇರಿ ಪ್ರಮುಖ ರಾಜಕೀಯ ಮುಖಂಡರೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು’ ಎಂದು ಹೇಳಿದ್ದಾರೆ.

ಇದನ್ನು ಓದಿ: 

ಪುಣೆಯಲ್ಲಿ ನಡೆದ ಖಾಸಗಿ ಟಿ.ವಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದ ಶಿವಸೇನಾ ವಕ್ತಾರ ಸಂಜಯ್‌ ರಾವುತ್‌, ರೌಡಿ ಹಾಜಿ ಮಸ್ತಾನ್‌ ಮಂತ್ರಾಲಯಕ್ಕೆ ಬಂದಿದ್ದಾಗ ಸರ್ಕಾರದ ಎಲ್ಲ ಅಧಿಕಾರಿಗಳು ಆತನನ್ನು ನೋಡಲು ಬಂದಿದ್ದರು. ಇಂದಿರಾಗಾಂಧಿ ಅವರೂ ದಕ್ಷಿಣ ಮುಂಬೈನ ಪಾಯ್‌ದೋನಿಯಲ್ಲಿ ಕರೀಂಲಾಲಾನನ್ನು ಭೇಟಿಯಾಗಿದ್ದರು ಎಂಬ ವಿವಾದಿತ ಹೇಳಿಕೆಯನ್ನು ನೀಡಿದ್ದರು.

ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ ಸುಂದರ್‌ ಶೇಖರ್‌ ಅವರ ಹೇಳಿಕೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು