ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಾಶ್ಮೀರದಲ್ಲಿ ಭಾರತೀಯರು ಜಮೀನು ಖರೀದಿಸುವಂತಿಲ್ಲ'ಎಂದು 370 ವಿಧಿಯಲ್ಲಿ ಹೇಳಿಲ್ಲ

Last Updated 7 ಆಗಸ್ಟ್ 2019, 5:20 IST
ಅಕ್ಷರ ಗಾತ್ರ

ನವದೆಹಲಿ:'ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವಭಾರತದ ಸಂವಿಧಾನದ 370ನೇ ವಿಧಿ ಪ್ರಕಾರ, ಕಾಶ್ಮೀರದಲ್ಲಿ ಇತರ ರಾಜ್ಯದವರು ಜಮೀನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ 'ಎಂಬುದು ಕಟ್ಟುಕತೆ.ಇದು ಸತ್ಯಕ್ಕೆ ದೂರವಾದ ಸಂಗತಿ. ಸಂವಿಧಾನದ370ನೇ ವಿಧಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದರ ಬಗ್ಗೆ ಹೇಳಿದ್ದರೂ, ಜಮೀನು ಬಗ್ಗೆ ಇಲ್ಲಿ ಯಾವುದೇ ಸಂಗತಿಗಳ ಉಲ್ಲೇಖ ಇಲ್ಲ ಎಂದು ದಿ ಸ್ಕ್ರಾಲ್ ಡಾಟ್ ಇನ್ ವರದಿ ಪ್ರಕಟಿಸಿದೆ.

ಕಾಶ್ಮೀರದಲ್ಲಿ ಹೊರಗಿನವರು (ಇತರ ರಾಜ್ಯದವರಿಗೆ) ಜಮೀನು ಖರೀದಿಸುವುದಕ್ಕೆ ನಿಷೇಧ ಹೇರಿದ್ದು ಡೋಗ್ರಾ ಸಮುದಾಯವರು. ಈ ಸಮುದಾಯ 1846ರಲ್ಲಿಅಮೃತ್‌ಸರ ಒಪ್ಪಂದ ಪ್ರಕಾರ ಬ್ರಿಟಿಷರಿಂದ ಗಡಿಭಾಗವನ್ನು ಖರೀದಿಸಿದ್ದರು.

1947ರ ನಂತರ 370ನೇ ವಿಧಿ ಜಾರಿಗೆ ಬಂದಿತ್ತು.ಕಾಶ್ಮೀರದಲ್ಲಿ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ನೇತೃತ್ವವಿದ್ದ ಕಾಲದಲ್ಲಿ ಭಾರತದೊಂದಿಗಿನ ಅನನ್ಯ ಸಂಬಂಧದ ಬಗ್ಗೆ ಮಾತುಕತೆ ನಡೆದಿತ್ತು. 370ನೇ ವಿಧಿ ಪ್ರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು, ಕಾಶ್ಮೀರಕ್ಕೆ ಅದರದ್ದೇ ಆದ ಸಂವಿಧಾನ ಹೊಂದುವ ಅಧಿಕಾರ ನೀಡಲಾಗಿತ್ತು.

ಆ ಕಾಲದಿಂದ ಈ 370ನೇ ವಿಧಿಯನ್ನು ಭಾರತ ಮತ್ತು ಜಮ್ಮು ಕಾಶ್ಮೀರ ನಡುವಿನ ಗೋಡೆ, ಸೇತುವೆ, ಕಣಿವೆ ಎಂದು ಬಿಂಬಿಸಲಾಗುತ್ತದೆ.1963ರಲ್ಲಿ ಈ ಬಗ್ಗೆ ಭಾರತದ ಸಂಸತ್ತಿನಲ್ಲಿ ಚರ್ಚೆಯಾಗಿತ್ತು.ಈ ವಿಧಿಯ ತಾಂತ್ರಿಕ ಸಂಕಷ್ಟಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾದಾಗ ಕಾಶ್ಮೀರದಲ್ಲಿ ಬೇರೆಯವರು ಜಮೀನು ಖರೀದಿಸುವುದಕ್ಕೆ ತಡೆಯೊಡ್ಡಲಾಗಿದೆ ಎಂಬ ಚಾಲ್ತಿಯಲ್ಲಿರುವ ಕಟ್ಟುಕತೆಯನ್ನು ಮುಂದುವರಿಸಲು ತೀರ್ಮಾನಿಸಿದ್ದರು ನೆಹರು.

ಅದೊಂದು ಹಳೇ ನಿಯಮ ಮತ್ತೆ ಬರುತ್ತಿದೆ.ಅದೇನು ಹೊಸ ವಿಷಯವಲ್ಲ, ಅದೊಂದು ಉತ್ತಮವಾದ ನಿಯಮವಾಗಿದ್ದು ಅದು ಮುಂದುವರಿಯಬೇಕು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಕಾಶ್ಮೀರ ಅಷ್ಟೊಂದು ಸೊಗಸಾದ ಸ್ಥಳವಾಗಿದ್ದು, ಧನಿಕರು ಅಲ್ಲಿನ ಎಲ್ಲ ಜಮೀನು ಖರೀದಿ ಮಾಡಿದರೆ ಅಲ್ಲಿ ವಾಸಿಸುವ ಜನರಿಗೆ ಕಷ್ಟವಾಗುತ್ತದೆ.ಬ್ರಿಟಿಷರ ಕಾಲದಿಂದಲೂ, ನೂರು ಮತ್ತು ಅದಕ್ಕಿಂತ ಹೆಚ್ಚು ವರ್ಷಗಳ ಹಿಂದೆ ಈ ರೀತಿಯ ಒಂದು ನಿಯಮ ಮಾಡಿದ್ದರಹಿಂದಿರುವ ನಿಜವಾದ ಕಾರಣವೂ ಇದೇ ಎಂದು ನೆಹರು ಲೋಕಸಭೆಯಲ್ಲಿ ಹೇಳಿದ್ದರು.

ಪ್ರಸ್ತುತ 370ನೇ ವಿಧಿಯಲ್ಲಿ ಏನು ಹೇಳಲಾಗುತ್ತಿದೆ ಎಂದರೆಜಮ್ಮು ಕಾಶ್ಮೀರದಲ್ಲಿನ ಭದ್ರತೆ, ವಿದೇಶ ವ್ಯವಹಾರ, ಸಂವಹನ ಮತ್ತು ಪೂರಕ ವಿಷಯಗಳಿಗೆ ಭಾರತವೇ ಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ.

1947 ಅಕ್ಟೋಬರ್‌ನಲ್ಲಿ ಗಡಿಭಾಗದಲ್ಲಿ ರಾಜಾಡಳಿತ ಮಾಡಿಕೊಂಡಿದ್ದ ಹರಿ ಸಿಂಗ್ ಕೂಡಾ ಇದನ್ನೇ ಜಾರಿ ಮಾಡಿದ್ದರು.ಈ ವಿಷಯಗಳನ್ನು ಹೊರತು ಪಡಿಸಿ ಭಾರತೀಯ ಸಂಸತ್ತಿನಲ್ಲಿ ಅಂಗೀಕಾರವಾದ ಕಾನೂನುಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.( ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಇದೇ ಕಾನೂನು ಅಂಗೀಕಾರವಾದರೆ ಮಾತ್ರ ಅದು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುತ್ತದೆ) .ಇದರ ಪರಿಣಾಮ ಕಾಶ್ಮೀರ ರಾಜ್ಯದ ಜನರು ಪ್ರತ್ಯೇಕ ನಿಯಮಗಳನ್ನು ಪಾಲಿಸತ್ತಾರೆ.ಪೌರತ್ವ, ಜಮೀನಿನ ಒಡೆತನ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಕಾಶ್ಮೀರ ಜನರಿಗೆ ಪ್ರತ್ಯೇಕ ಕಾನೂನುಗಳಿವೆ.

ಕಾಶ್ಮೀರದಲ್ಲಿ ಹೊರಗಿನವರು ಜಮೀನು ಖರೀದಿಸುವುದನ್ನು ತಡೆಯುವ ಕಾನೂನನ್ನು ಡೋಗ್ರಾ ಕಾಲದಲ್ಲಿ ಜಾರಿಗೆ ತಂದಿದ್ದರೂ ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಈ ಕಾನೂನನ್ನು ತೆಗೆದು ಹಾಕಿಲ್ಲ ಎಂಬುದು ಸತ್ಯ.ಆದರೆ ಗಮನಿಸಬೇಕಾದ ಸಂಗತಿ ಎಂದರೆ ಇದೇ ರೀತಿ ಖರೀದಿ ಮತ್ತು ಮಾರುವುದಕ್ಕೆ ಇರುವ ನಿರ್ಬಂಧ ಭಾರತದ ಇತರ ಪ್ರದೇಶಗಳಲ್ಲಿಯೂ ಇದೆ.ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ನಾಗಾಲ್ಯಾಂಡ್‌ನಲ್ಲಿಯೂ ಈ ರೀತಿಯ ಕಾನೂನು ಇದೆ.

ಭೂಮಿ ಖರೀದಿ ಬಗ್ಗೆ ಕಟ್ಟುಕತೆ ಇರುವಂತೆಯೇ370 ವಿಧಿಯಲ್ಲಿ ಮಹಿಳೆಯರ ವಿರುದ್ಧ ತಾರತಮ್ಯವಿದೆ ಎಂಬ ಮಾತು ಕೂಡಾ ಸತ್ಯಕ್ಕೆ ದೂರವಾದುದು.ಜಮ್ಮು ಕಾಶ್ಮೀರದ ಮಹಿಳೆಯೊಬ್ಬರು ರಾಜ್ಯದ ಹೊರಗಿನ ವ್ಯಕ್ತಿಯನ್ನು ಮದುವೆಯಾದರೆ ಆಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಮೀನು ಖರೀದಿಸುವಂತಿಲ್ಲ ಎಂದು 370 ವಿಧಿಯಲ್ಲಿದೆ ಎಂದು ಹೇಳಲಾಗುತ್ತಿದೆ.ಈ ವಿಷಯ2000 ಇಸವಿಯಲ್ಲಿ ರಾಜ್ಯದ ಹೈಕೋರ್ಟ್‌ ಮೆಟ್ಟಿಲೇರಿದಾಗ, ಕಾಶ್ಮೀರದ ಮಹಿಳೆ ಹೊರ ರಾಜ್ಯದ ವ್ಯಕ್ತಿಯನ್ನು ಮದುವೆಯಾದರೆ ಆಕೆ ಜಮೀನು ಖರೀದಿಸುವ ತನ್ನ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂಬ ನ್ಯಾಯಾಲಯ ತೀರ್ಪು ನೀಡಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT