ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಪಕ್ಷಗಳಿಗೆ 2513 ಕೋಟಿ ಅನಾಮಧೇಯ ದೇಣಿಗೆ: ಬಿಜೆಪಿ–ಕಾಂಗ್ರೆಸಿಗೆ ಎಷ್ಟು

Last Updated 10 ಮಾರ್ಚ್ 2020, 10:23 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಪಕ್ಷಗಳು ಅನಾಮಧೇಯಮೂಲಗಳಿಂದ 2004–05ರಿಂದ 2018–19ರ ಅವಧಿಯಲ್ಲಿ ₹ 11,234 ಕೋಟಿ ದೇಣಿಗೆ ಪಡೆದಿವೆ ಎಂದು ಚಿಂತಕರ ಚಾವಡಿ ‘ಅಸೋಷಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌’ (ಎಡಿಆರ್) ಚಿಂತಕರ ಚಾವಡಿ ಹೇಳಿದೆ.

ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಎನ್‌ಸಿಪಿ, ಬಿಎಸ್‌ಪಿ ಮತ್ತು ಸಿಪಿಐ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಆಧರಿಸಿ ಈ ವಿಶ್ಲೇಷಣೆ ನಡೆಸಲಾಗಿದೆ.

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ₹ 20 ಸಾವಿರಕ್ಕಿಂತ ಕಡಿಮೆ ಮೊತ್ತದ ದೇಣಿಗೆಯ ಮೂಲವನ್ನು ಉಲ್ಲೇಖಿಸದೆ, ಅನಾಮಧೇಯ ಮೂಲಗಳು ಎಂದು ನಮೂದಿಸಲಾಗಿದೆ. ಇಂಥ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ಬಂದ ಒಟ್ಟು ಮೊತ್ತ ₹ 11,234 ಕೋಟಿ ಎನ್ನುತ್ತದೆ ಎಡಿಆರ್.

ಚುನಾವಣಾ ಬಾಂಡ್‌ಗಳು, ಕೂಪನ್‌ಗಳ ಮಾರಾಟ, ಪರಿಹಾರ ನಿಧಿ, ಇತರ ಆದಾಯಗಳು, ಸ್ವಯಂ ಪ್ರೇರಿತ ದೇಣಿಗೆ ಮತ್ತು ಸಭೆ/ಮೋರ್ಚಾಗಳಲ್ಲಿ ಸಂಗ್ರಹವಾದ ಹಣ ಇದರಲ್ಲಿ ಸೇರಿದೆ.

ಕೂಪನ್ ಮಾರಾಟ ಅಥವಾ ಚುನಾವಣಾ ಬಾಂಡ್‌ಗಳ ಮೂಲಕ ತನಗೆ ಯಾವುದೇ ಹಣ ಬಂದಿಲ್ಲ ಎಂದು ಬಿಎಸ್‌ಪಿ ಪ್ರಮಾಣ ಪತ್ರ ಸಲ್ಲಿಸಿದೆ.

2018–19ರಲ್ಲಿ ಬಿಜೆಪಿ ₹ 1,612.04 ಕೋಟಿ ಅನಾಮಧೇಯ ಮೂಲಗಳಿಂದ ಬಂದಿದೆ ಎಂದು ಘೋಷಿಸಿಕೊಂಡಿತ್ತು. ಇತರ ಐದು ರಾಷ್ಟ್ರೀಯ ಪಕ್ಷಗಳು ಘೋಷಿಸಿಕೊಂಡಿರುವ ಮೊತ್ತಕ್ಕಿಂತ ಇದು ಒಂದೂವರೆ ಪಟ್ಟು ಹೆಚ್ಚು.

ಕಾಂಗ್ರೆಸ್ ಪಕ್ಷವು ₹ 728.88 ಕೋಟಿಯಷ್ಟು ಮೊತ್ತ ಅನಾಮಧೇಯ ಮೂಲಗಳಿಂದ ಬಂದಿದೆ ಎಂದು ಘೋಷಿಸಿತ್ತು. ಇದು ಒಟ್ಟು ಮೊತ್ತದ ಶೇ 29ರಷ್ಟಾಗುತ್ತದೆ.

2004–05ರಿಂದ 2018–19ರ ಅವಧಿಯಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಕೂಪನ್ ಮಾರಾಟದಿಂದ ₹ 3902.63 ಕೋಟಿ ಸಂಗ್ರಹಿಸಿವೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT