ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ: 100ರ ಗಡಿ ದಾಟಿದ ಎನ್‌ಡಿಎ

Last Updated 20 ಜೂನ್ 2020, 3:23 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸಂಖ್ಯಾ ಬಲವನ್ನು 86ಕ್ಕೆ ಹೆಚ್ಚಿಸಿಕೊಂಡಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಇದೇ ಮೊದಲ ಬಾರಿಗೆ 100 ಗಡಿ ದಾಟಿದೆ. ಎನ್‌ಡಿಎ 101 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್‌ ನೇತೃತ್ವದ ಯುಪಿಎ 65 ಸ್ಥಾನಗಳನ್ನು ಹೊಂದಿದೆ.

245 ಸ್ಥಾನಗಳನ್ನು ಹೊಂದಿರುವ ರಾಜ್ಯಸಭೆಯಲ್ಲಿ ಬಹುಮತಕ್ಕೆ 123 ಸ್ಥಾನಗಳು ಬೇಕು. 101 ಸ್ಥಾನಗಳನ್ನು ಹೊಂದಿರುವ ಎನ್‌ಡಿಎಗೆ ಬಹುಮತಕ್ಕೆ 22 ಸ್ಥಾನಗಳ ಕೊರತೆ ಇದೆ.

ತೃಣಮೂಲ ಕಾಂಗ್ರೆಸ್‌ 13, ಎಐಎಡಿಎಂಕೆ 9, ಬಿಜೆಡಿ 7, ಡಿಎಂಕೆ 7, ವೈಎಸ್‌ಆರ್ ಕಾಂಗ್ರೆಸ್‌ 4 ಸ್ಥಾನಗಳನ್ನು ಸ್ಥಾನಗಳನ್ನು ಹೊಂದಿವೆ. ಈ ಪೈಕಿ ಎಐಎಡಿಎಂಕೆ, ವೈಎಸ್‌ಆರ್‌ ಕಾಂಗ್ರೆಸ್‌, ಬಿಜೆಡಿ ಪಕ್ಷಗಳು ಎನ್‌ಡಿಎಗೆ ಬೆಂಬಲ ನೀಡುತ್ತಿವೆ.

ರಾಜ್ಯಸಭೆಯಲ್ಲಿ ಒಟ್ಟು 24 ಸ್ಥಾನಗಳು ತೆರವಾಗಿದ್ದವು. ಶುಕ್ರವಾರ 19 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಐವರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದ ಜೋತಿರಾದಿತ್ಯ ಸಿಂಧಿಯಾ, ಸುಮೀರ್‌ ಸಿಂಗ್ ಹಾಗೂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಆಯ್ಕೆಯಾಗಿದ್ದಾರೆ. .

ರಾಜಸ್ಥಾನದಲ್ಲಿ ಆಪರೇಷನ್‌ ಕಮಲದ ಆತಂಕದಲ್ಲಿದ್ದ ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಗಳಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT