ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆ–2020 ಹಾಗೂ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣಕ್ಕೆ ಲಕ್ಷಾಂತರ ಉದ್ಯೋಗಿಗಳು ಹಾಗೂ ಎಂಜಿನಿಯರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್‌ಗಳ ಒಕ್ಕೂಟ (ಎಐಪಿಇಎಫ್) ಹೇಳಿದೆ.

ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳು ಪ್ರಕಟಿಸಿದ್ದರು. ವಿದ್ಯುತ್ ತಿದ್ದುಪಡಿ ಮಸೂದೆಯ ಕರಡನ್ನು ಏಪ್ರಿಲ್ 17ರಂದು ಸಚಿವಾಲಯ ಬಿಡುಗಡೆ ಮಾಡಿತ್ತು.

‘ಕೇಂದ್ರ ಸರ್ಕಾರದ ಎರಡು ನಿರ್ಧಾರಗಳನ್ನು ಖಂಡಿಸಿ ವಿದ್ಯುತ್ ವಲಯದ ಲಕ್ಷಾಂತರ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು. ಬಹುತೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಚೇರಿಗಳಲ್ಲಿ ಕಪ್ಪು ಪಟ್ಟಿ ಧರಿಸಿ ಸಭೆ ನಡೆಸಲಾಯಿತು. ಈ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು’ ಎಂದು ಒಕ್ಕೂಟದ ವಕ್ತಾರ ವಿ.ಕೆ. ಗುಪ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮಸೂದೆಯು ಅಂಗೀಕಾರಗೊಂಡ ಬಳಿಕ ರೈತರು ತಿಂಗಳಿಗೆ ₹5,000ದಿಂದ ₹6,000 ವಿದ್ಯುತ್ ದರ ಪಾವತಿಸಬೇಕಾಗುತ್ತದೆ. ತಿಂಗಳಿಗೆ 300 ಯೂನಿಟ್ ವಿದ್ಯುತ್ ಬಳಸುವ ಬಳಕೆದಾರರು ಪ್ರತಿ ಯೂನಿಟ್‌ಗೆ ₹8ರಿಂದ ₹10 ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ವಿದ್ಯುತ್ ಸೌಲಭ್ಯವು ಹಕ್ಕೇ ಹೊರತು ಐಷಾರಾಮ ಅಲ್ಲ. ರೈತರು ಹಾಗೂ ಬಡತದನ ರೇಖೆಗಿಂತ ಕೆಳಗಿರುವವರಿಗೆ ಹೆಚ್ಚಿನ ದರ ವಿಧಿಸುವ ನಿರ್ಧಾರ ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಮಸೂದೆಯು ರೈತ ವಿರೋಧಿ ಹಾಗೂ ದೇಶೀಯ ಗ್ರಾಹಕ ವಿರೋಧಿಯಾಗಿದ್ದು, ದೇಶದ ಇಡೀ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಇದು ದಾರಿ ಮಾಡಿಕೊಡಲಿದೆ.
–ವಿ.ಕೆ. ಗುಪ್ತಾ, ಎಐಪಿಇಎಫ್ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.