'ನಯಾ ಪಾಕ್‌’ ಉಗ್ರರ ವಿರುದ್ಧ ನೂತನ ಕ್ರಮ ಕೈಗೊಳ್ಳಲಿ: ಭಾರತ ಸರ್ಕಾರ

ಭಾನುವಾರ, ಮಾರ್ಚ್ 24, 2019
27 °C

'ನಯಾ ಪಾಕ್‌’ ಉಗ್ರರ ವಿರುದ್ಧ ನೂತನ ಕ್ರಮ ಕೈಗೊಳ್ಳಲಿ: ಭಾರತ ಸರ್ಕಾರ

Published:
Updated:

ನವದೆಹಲಿ: ‘ನಯಾ ಪಾಕಿಸ್ತಾನ’(ಹೊಸ ಪಾಕಿಸ್ತಾನ) ಎಂದು ಹೇಳಿಕೊಳ್ಳುವ ಪಾಕಿಸ್ತಾನ ಸರ್ಕಾರ ಉಗ್ರರ ಗುಂಪುಗಳ ವಿರುದ್ಧ ಹಾಗೂ ಗಡಿಯಲ್ಲಿ ನಡೆಯುತ್ತಿರುವ ಉಗ್ರರ ಕೃತ್ಯಗಳ ವಿರುದ್ಧ ನೂತನವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ಸರ್ಕಾರ ಪಾಕ್‌ಗೆ ಒತ್ತಾಯಿಸಿದೆ.

ಪಾಕಿಸ್ತಾನ ಸರ್ಕಾರ ಜೈಷ್‌–ಎ–ಮೊಹಮ್ಮದ್‌ನ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದೆಯೇ? ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್‌ ಶನಿವಾರ ಪ್ರಶ್ನಿಸಿದ್ದಾರೆ.

ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ, ಆ ವಿಡಿಯೊಗಳನ್ನೇಕೆ ಬಿಡುಗಡೆ ಮಾಡುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.

ಪಾಕಿಸ್ತಾನದ ಎಫ್‌–16 ವಿಮಾನವನ್ನು ಭಾರತೀಯ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಹೊಡೆದುರುಳಿಸಿದ್ದಾರೆ. ಅದಕ್ಕೆ ನಮ್ಮ ಬಳಿ ‘ಎಲೆಕ್ಟ್ರಾನ್‌’ ಸಾಕ್ಷ್ಯಗಳಿವೆ. ಬಾರತದ ವಿರುದ್ಧ ಪಾಕಿಸ್ತಾನ ಬಳಸಿರುವ ಎಫ್‌–16 ವಿಮಾನವು ಪಾಕಿಸ್ತಾನಕ್ಕೆ ಮಾರಾಟ ಮಾಡಿರುವ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿವೆಯೇ ಎಂದು ಪರಿಶೀಲಿಸುವಂತೆ ನಾವು ಅಮೆರಿಕಕ್ಕೆ ಕೇಳಿದ್ದೇವೆ ಎಂದು ಹೇಳಿದರು.

ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯದ ಕಾನೂನುಬದ್ಧ ಕಾಳಜಿಗಳನ್ನು ಬಗೆಹರಿಸಲು ಪಾಕಿಸ್ತಾನ ಯಾವುದೇ ಬಗೆಯಲ್ಲು ಗಂಭೀರ ಉದ್ದೇಶವನ್ನು ತೋರಿಸಲಿಲ್ಲ ಎಂದು ಅವರು ಪಾಕ್‌ ವಿರುದ್ಧ ಹರಿಹಾಯ್ದಿದ್ದಾರೆ.

ಪುಲ್ವಾಮ ದಾಳಿ ನಡೆಸಿದ್ದಾಗಿ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ತಾನೇ ಒಪ್ಪಿಕೊಂಡಿದೆ. ಆದರೆ, ಜೈಷ್‌ ಸಂಘಟನೆ ಈ ದಾಳಿಯ ಹೊಣೆ ಹೊತ್ತಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರು ನಿರಾಕರಿಸುತ್ತಿದ್ದಾರೆ. ಪಾಕಿಸ್ತಾನ ಜೈಷ್‌ ಸಂಘಟನೆಯನ್ನು ಪೋಷಿಸುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. 
 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !