ಶನಿವಾರ, ಜೂನ್ 19, 2021
21 °C
ಪಾಕಿಸ್ತಾನ ಭಯೋತ್ಪಾದನಾ ತಡೆ ಪ್ರಾಧಿಕಾರ ಎಚ್ಚರಿಕೆ

ಪಾಕಿಸ್ತಾನದಲ್ಲಿ ಚುನಾವಣಾ ಪ್ರಚಾರದ ವೇಳೆ ಉಗ್ರರ ದಾಳಿ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌ : ಚುನಾವಣಾ ಪ್ರಚಾರದ ವೇಳೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಇಮ್ರಾನ್‌ ಖಾನ್‌ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರಿಗೆ ಪಾಕಿಸ್ತಾನದ ಭಯೋತ್ಪಾದನಾ ತಡೆ ಪ್ರಾಧಿಕಾರ (ಎನ್‌ಎಸಿಟಿಎ) ಎಚ್ಚರಿಕೆ ನೀಡಿದೆ. ಜುಲೈ 25ರಂದು ಪಾಕಿಸ್ತಾನ ಸಂಸತ್ತಿಗೆ ಚುನಾವಣೆ ನಡೆಯಲಿದೆ.

‘ಪ್ರಾಂತೀಯ ಗೃಹ ಇಲಾಖೆ ಹಾಗೂ ಆಂತರಿಕ ಭದ್ರತಾ ಸಚಿವಾಲಯಗಳಿಗೆ 13 ಎಚ್ಚರಿಕಾ ಸಂದೇಶಗಳನ್ನು ಸೋಮವಾರವೇ ಕಳುಹಿಸಲಾಗಿದೆ’ ಎಂದು ಎನ್‌ಎಸಿಟಿಎ ತಿಳಿಸಿದೆ.

‘ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ (ಪಿಪಿಪಿ), ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ನವಾಜ್‌ (ಪಿಎಂಎಲ್‌–ಎನ್‌) ಪಕ್ಷದ ಪ್ರಮುಖ ನಾಯಕರು ಹಾಗೂ ಇತರೆ ಆರು ನಾಯಕರ ಮೇಲೆ ಚುನಾವಣೆ ವೇಳೆ ದಾಳಿ ನಡೆಸುವ ಸಾಧ್ಯತೆಯಿದೆ’ ಎಂದು ಎನ್‌ಎಸಿಟಿಎ ಎಚ್ಚರಿಸಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಪಾಕಿಸ್ತಾನ್‌ ತೆಹ್ರೀಕ್‌–ಐ–ಇನ್ಸಾಫ್‌ನ ಮುಖ್ಯಸ್ಥ ಇಮ್ರಾನ್‌ ಖಾನ್‌, ಅವಾಮಿ ನ್ಯಾಷನಲ್‌ ಪಕ್ಷದ ನಾಯಕರಾದ ಅಸ್ಪಾಂದ್ಯಾರ್‌ ವಾಲಿ, ಅಮೀರ್‌ ಹೈದರ್‌ ಹೋಟಿ, ಖ್ವಾಮಿ ವತನ್‌ ಪಕ್ಷದ ಮುಖ್ಯಸ್ಥ ಅಫ್ತಾಬ್‌ ಶೇರ್ಪಾವೊ, ಜಮಿಯತ್‌ ಉಲೇಮಾ–ಐ–ಇಸ್ಲಾಮ್‌ ಪಕ್ಷದ ನಾಯಕ ಅಕ್ರಂ ಖಾನ್‌, ಹಫೀಜ್‌ ಸಯೀದ್‌ ಮಗ ತಹ್ಲಾ ಸಯೀದ್‌ ಮೇಲೆ ಯಾವುದೇ ಸಂದರ್ಭದಲ್ಲಿ ದಾಳಿ ನಡೆಯಬಹುದು’ ಎಂದು ಸಂಸ್ಥೆಯ ನಿರ್ದೇಶಕ ಒಬೈದ್‌ ಫಾರೂಖ್‌ ಎಚ್ಚರಿಕೆ ನೀಡಿದ್ದಾರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು