ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಕಿಸಾನ್ ಯೋಜನೆ: 5 ಕೋಟಿಗೂ ಅಧಿಕ ರೈತರಿಗೆ ಇನ್ನೂ ಸಿಕ್ಕಿಲ್ಲ 3ನೇ ಕಂತಿನ ಹಣ

Last Updated 7 ಫೆಬ್ರುವರಿ 2020, 5:19 IST
ಅಕ್ಷರ ಗಾತ್ರ

ನವದೆಹಲಿ: ಕೃಷಿಕರಿಗೆ ವಾರ್ಷಿಕ ₹ 6000 ಆರ್ಥಿಕ ನೆರವು ನೀಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್ ನಿಧಿಯೋಜನೆಯಡಿ 5 ಕೋಟಿಗೂ ಅಧಿಕ ರೈತರಿಗೆ ಈವರೆಗೆ ಮೂರನೇ ಕಂತಿನ ಹಣ ಕೈಸೇರಿಲ್ಲ. ಈ ಮಾಹಿತಿಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಅಂಕಿಅಂಶಗಳಲ್ಲೇ ಬಹಿರಂಗಗೊಂಡಿದೆ.

ನೋಂದಣಿ ಮಾಡಿಸಿಕೊಂಡಿದ್ದರೂ ಕೆಲ ರೈತರಿಗೆ ಸಹಾಯಧನದ ಕಂತುಗಳು ಪಾವತಿಯಾಗದಿರುವ ಕುರಿತು ಸಚಿವಾಲಯ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ.

ಡಿಸೆಂಬರ್ 1, 2018ಕ್ಕೆ ಅನುಷ್ಠಾನಕ್ಕೆ ಬಂದ ಈ ಯೋಜನೆಯಲ್ಲಿ ನಾಲ್ಕು ತಿಂಗಳಿಗೊಮ್ಮೆ ₹2,000 ಅನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.

ಪಿಟಿಐ ಪತ್ರಕರ್ತರೊಬ್ಬರು ಆರ್‌ಟಿಐ ಮೂಲಕ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕೃಷಿ ಇಲಾಖೆ, ‘2.51 ಕೋಟಿ ರೈತರಿಗೆ ಎರಡನೇ ಕಂತು,5.16 ಕೋಟಿ ರೈತರಿಗೆ ಮೂರನೇ ಕಂತಿನ ಹಣ ಸಿಕ್ಕಿಲ್ಲ’ ಎಂದು ಹೇಳಿತ್ತು.

‘ಡಿಸೆಂಬರ್ 2018ರಿಂದನವೆಂಬರ್ 2019ರ ಅವಧಿಯಲ್ಲಿ 9 ಕೋಟಿಗಿಂತಲೂ ಹೆಚ್ಚು ರೈತರು ಈ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಇವರ ಪೈಕಿ 7.62 ಕೋಟಿ ಅಥವಾ ಶೇ.84ರಷ್ಟು ರೈತರಿಗೆ ಮೊದಲ ಕಂತಿನ ಹಣ ಸಿಕ್ಕಿದೆ. 6.5 ಕೋಟಿ ರೈತರಿಗೆ ಎರಡನೇ ಕಂತು ಮತ್ತು3.85 ಕೋಟಿಫಲಾನುಭವಿಗಳಿಗೆ ಮೂರನೇ ಕಂತಿನ ಹಣ ಸಿಕ್ಕಿದೆ’ ಎಂದು ಕೃಷಿ ಇಲಾಖೆ ಮಾಹಿತಿ ನೀಡಿತ್ತು.

ಡಿಸೆಂಬರ್ 2018 ಮತ್ತು ಮಾರ್ಚ್ 2019ರ ನಡುವೆ 4.74 ಕೋಟಿ ರೈತರು ನೋಂದಣಿ ಮಾಡಿದ್ದಾರೆ. ಈ ಪೈಕಿ 4.22 ಕೋಟಿ ರೈತರಿಗೆ ಮೊದಲ ಕಂತು, 4.02 ಕೋಟಿ ರೈತರಿಗೆ ಎರಡನೇ ಕಂತು ಮತ್ತು 3.85 ರೈತರಿಗೆ ಮೂರನೇ ಕಂತು ಲಭಿಸಿದೆ. ನೋಂದಣಿ ಮಾಡಿಸಿದ್ದರೂ 50 ಲಕ್ಷ ರೈತರಿಗೆ ಮೊದಲ ಕಂತು, 70 ಲಕ್ಷ ರೈತರಿಗೆ ಎರಡನೇ ಕಂತು ಮತ್ತು 90 ಲಕ್ಷ ರೈತರಿಗೆ ಮೂರನೇ ಕಂತು ಯಾಕೆ ಸಿಗಲಿಲ್ಲ ಎಂಬುದರ ಬಗ್ಗೆ ಸಚಿವಾಲಯ ಮಾಹಿತಿ ನೀಡಿಲ್ಲ.

ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ನೋಂದಣಿ ಮಾಡಿದ ಯಾರೊಬ್ಬರೂ ಇಲ್ಲ ಹಾಗಾಗಿ ಅಲ್ಲಿಗೆ ಹಣ ನೀಡಿಲ್ಲ ಎಂದು ಸಚಿವಾಲಯಹೇಳಿದೆ.

ಕಳೆದ ವರ್ಷ ಏಪ್ರಿಲ್ ಮತ್ತು ಜುಲೈ ತಿಂಗಳ ನಡುವೆ 3.08 ಕೋಟಿ ರೈತರು ನೋಂದಣಿ ಮಾಡಿದ್ದಾರೆ. ಇದರಲ್ಲಿ 2.66 ಕೋಟಿ ರೈತರು ಮೊದಲ ಕಂತು ಮತ್ತು 2.47 ಕೋಟಿ ರೈತರು ಎರಡನೇ ಕಂತಿನ ಹಣ ಪಡೆದಿದ್ದಾರೆ.ಏತನ್ಮಧ್ಯೆ ನೋಂದಣಿ ಮಾಡಿದ 40 ಲಕ್ಷ ಮಂದಿಗೆ ಮೊದಲ ಕಂತು ಮತ್ತು 61 ಲಕ್ಷ ಮಂದಿಗೆ ಎರಡನೇ ಕಂತು ಯಾಕೆ ಸಿಕ್ಕಿಲ್ಲ ಎಂಬುದನ್ನು ಆರ್‌ಟಿಐ ಉತ್ತರದಲ್ಲಿ ಸಚಿವಾಲಯ ಉಲ್ಲೇಖಿಸಿಲ್ಲ.

ಯಾವ ಕಾಲಾವಧಿಯಲ್ಲಿ ನೋಂದಣಿ ಮಾಡಿರುತ್ತಾರೋ ಅವರು ಆ ಕಾಲಾವಧಿಯಲ್ಲಿ ಫಲಾನುಭವಿಗಳಾಗಲು ಅರ್ಹತೆ ಪಡೆದಿರುತ್ತಾರೆ. ಆದ್ದರಿಂದ ಏಪ್ರಿಲ್ 2019- ಜುಲೈ 2019ರ ಅವಧಿಯಲ್ಲಿ ನೋಂದಣಿ ಮಾಡಿದವರಿಗೆ ಮೂರನೇ ಕಂತು ಬಾಕಿಯಾಗಿಲ್ಲ ಎಂದು ಸಚಿವಾಲಯ ಹೇಳಿದೆ.

ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಚಂಡೀಗಡದಲ್ಲಿ ಈ ಅವಧಿಯಲ್ಲಿ ಯಾರೊಬ್ಬರು ನೋಂದಣಿ ಮಾಡಿಲ್ಲ. ಹಾಗಾಗಿ ಅಲ್ಲಿರುವವರಿಗೆ ಮೊದಲ ಮತ್ತು ಎರಡನೇ ಕಂತು ಸಿಕ್ಕಿಲ್ಲ.

ಆಗಸ್ಟ್ ಮತ್ತು 2019 ನವೆಂಬರ್ 30ರ ಅವಧಿಯಲ್ಲಿ 1.19 ಕೋಟಿ ರೈತರು ನೋಂದಣಿ ಮಾಡಿದ್ದು ಸರಿಸುಮಾರು 73.66 ಕೋಟಿ ರೈತರಿಗೆ ಮೊದಲ ಕಂತು ನೀಡಲಾಗಿದೆ. ಈ ಅವಧಿಯಲ್ಲಿ 45 ಲಕ್ಷಕಿಂತಲೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಕಂತು ಯಾಕೆ ನೀಡಿಲ್ಲ ಎಂಬುದರ ಬಗ್ಗೆ ಉಲ್ಲೇಖವಿಲ್ಲ.

ಆಗಸ್ಟ್ 2019- ನವೆಂಬರ್ 2019ರ ಅವಧಿಯಲ್ಲಿ ನೋಂದಣಿ ಮಾಡಿದವರಿಗೆ ಎರಡು ಮತ್ತು ಮೂರನೇ ಕಂತು ಬಾಕಿ ಉಳಿದಿಲ್ಲ ಎಂದಿದೆ ಸಚಿವಾಲಯ.

‘ರಾಜ್ಯವಾರು ಎಷ್ಟು ರೈತರು ಇದ್ದಾರೆ? ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಎಷ್ಟು ಹಣ ಅವರಿಗೆ ಸಿಕ್ಕಿದೆ’ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಸಚಿವಾಲಯವನ್ನು ಕೇಳಲಾಗಿತ್ತು.

ಇದಕ್ಕೆ ಉತ್ತರಿಸಿರುವ ಸಚಿವಾಲಯವು 2018 ಡಿಸೆಂಬರ್ 1ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ಬಂತು. ಫಲಾನುಭವಿಗಳಬ್ಯಾಂಕ್ ಖಾತೆಗೆ ಈ ಯೋಜನೆಯಡಿ ಹಣ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ವೆಬ್ ಪೋರ್ಟಲ್‌ನಲ್ಲಿ ನಿರ್ದಿಷ್ಟ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳೇಫಲಾನುಭವಿಗಳನ್ನು ಗುರುತಿಸಿ ಮಾಹಿತಿಅಪ್‌ಲೋಡ್ ಮಾಡಬೇಕು ಎಂದು ಹೇಳಿದೆ.

ಅಪ್‌ಲೋಡ್ ಮಾಡಿದಈ ಮಾಹಿತಿಗಳು ಒಂದಕ್ಕಿಂತ ಹಲವು ಹಂತದಲ್ಲಿದೃಢೀಕರಣಕೊಂಡ ಮೇಲೆ ಫಲಾನುಭವಿಗಳಿಗೆ ಹಣ ಬ್ಯಾಂಕ್ ಖಾತೆ ಮೂಲಕ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿ www.pmkisan.gov.in ಇಲ್ಲಿದೆ.

ಫೆಬ್ರುವರಿ 4ರಂದು ಈ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಆಗಿರುವ ಮಾಹಿತಿ ಪ್ರಕಾರ ಸುಮಾರು 8.84 ಕೋಟಿ ರೈತರು ನೋಂದಣಿ ಮಾಡಿದ್ದರು. 8.41 ಕೋಟಿ ರೈತರು ಮೊದಲ ಕಂತು, 7.56 ಕೋಟಿ ರೈತರು ಎರಡನೇ, 6.19 ಕೋಟಿ ಮೂರನೇ ಮತ್ತು 3.03 ಕೋಟಿ ರೈತರು ನಾಲ್ಕನೇ ಕಂತು ಪಡೆದಿದ್ದಾರೆ.

ರಾಜ್ಯ ನೋಂದಣಿ ಮಾಡಿದವರ ಸಂಖ್ಯೆ ಮೊದಲ ಕಂತು ಎರಡನೇ ಕಂತು ಮೂರನೇ ಕಂತು
ಅಸ್ಸಾಂ 16.97 ಲಕ್ಷ 14.02 ಲಕ್ಷ 13.72 ಲಕ್ಷ 9.87 ಲಕ್ಷ
ಮಹಾರಾಷ್ಟ್ರ 42.34 ಲಕ್ಷ 36.98ಲಕ್ಷ 31.53ಲಕ್ಷ 27.67 ಲಕ್ಷ
ಕೇರಳ 23.83 23.83 18.79 18.43

ಡಿಸೆಂಬರ್ 2018 ಮತ್ತು ಮಾರ್ಚ್ 2019ರಲ್ಲಿ 26.13 ಲಕ್ಷ ರೈತರು ಕೇರಳದಲ್ಲಿ ನೋಂದಣಿ ಮಾಡಿದ್ದರು
ಈ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಯಾರೂ ನೋಂದಣಿ ಮಾಡಿಲ್ಲ. ಪಶ್ಚಿಮ ಬಂಗಾಳ ಈ ಯೋಜನೆ ಜಾರಿ ಮಾಡಲು ನಿರಾಕರಿಸಿತ್ತು ಎಂದು ಸಚಿವಾಲಯ ಹೇಳಿದೆ.

ಉತ್ತರ ಪ್ರದೇಶದಲ್ಲಿ ನೋಂದಣಿ ಮಾಡಿದ 19.64 ಲಕ್ಷ ರೈತರ ಪೈಕಿ 9.57 ಲಕ್ಷ ರೈತರಿಗೆ ಮೊದಲ ಕಂತು ಲಭಿಸಿದೆ. ಗುಜರಾತಿನಲ್ಲಿ 1.98 ಲಕ್ಷ ರೈತರು ನೋಂದಣಿ ಮಾಡಿದ್ದು ಸರಿಸುಮಾರು 1.2 ಲಕ್ಷ ರೈತರಿಗೆ ಮೊದಲ ಕಂತು ಸಿಕ್ಕಿದೆ.

ಮಧ್ಯ ಪ್ರದೇಶದಲ್ಲಿ ನೋಂದಣಿ ಮಾಡಿದ 17.18 ಲಕ್ಷ ರೈತರ ಪೈಕಿ 9.78 ಲಕ್ಷ ರೈತರಿಗೆ ಮೊದಲ ಕಂತು ಸಿಕ್ಕಿದೆ. ಒಡಿಶಾದಲ್ಲಿ ನೋಂದಣಿ ಮಾಡಿದ 5.6 ಲಕ್ಷ ರೈತರ ಪೈಕಿ 5,507 ರೈತರಿಗೆ ಮಾತ್ರ ಮೊದಲ ಕಂತು ಸಿಕ್ಕಿದೆ. ಸಿಕ್ಕಿಂನಲ್ಲಿ ನೋಂದಣಿ ಮಾಡಿದ 7,326,ರೈತರಲ್ಲಿ ಯಾರಿಗೂ ಮೊದಲ ಕಂತಿನ ಹಣ ಸಿಕ್ಕಿಲ್ಲ. ದೆಹಲಿಯಲ್ಲಿ 1,734 ರೈತರ ಪೈಕಿ 1,447 ರೈತರಿಗೆ ಮೊದಲ ಕಂತು ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT