ಗುರುವಾರ , ಡಿಸೆಂಬರ್ 12, 2019
17 °C
ಹುಲಿ ದಿನ

ಹುಲಿ ಗಣತಿ ವರದಿ ಬಿಡುಗಡೆ: ದೇಶದಲ್ಲಿ 2967, ರಾಜ್ಯದಲ್ಲಿ 524 ಹುಲಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ 2967 ಹುಲಿಗಳು ಇರುವುದಾಗಿ 2018ರ ಹುಲಿ ಗಣತಿ ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಗುರುತಿಸಿಕೊಂಡಿದೆ. 

ನಾಲ್ಕನೇ ಹುಲಿಗಣತಿಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು. 2006ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ. 

ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇ 33ರಷ್ಟು ಹೆಚ್ಚಳ ಗುರುತಿಸಲಾಗಿದೆ. ನಾಲ್ಕನೇ ಹುಲಿ ಗಣತಿಯ ಪ್ರಕಾರ, ದೇಶದಲ್ಲಿ 2967 ಹುಲಿಗಳಿವೆ. ಹುಲಿಗಳ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮಗಳನ್ನು ಅನುಸಿರುಸುತ್ತಿದ್ದು, ನಾಲ್ಕು ವರ್ಷಗಳಲ್ಲಿ 741 ಹುಲಿಗಳು ಹೆಚ್ಚಿವೆ. 

ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ 524 ಎಂದು ಲೆಕ್ಕಹಾಕಲಾಗಿದೆ. 2014ರಲ್ಲಿ ರಾಜ್ಯದಲ್ಲಿ 406 ಹುಲಿಗಳನ್ನು ಗುರುತಿಸಲಾಗಿತ್ತು. ಮಧ್ಯ ಪ್ರದೇಶದಲ್ಲಿ 526 ಹುಲಿಗಳಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಉತ್ತರಾಖಂಡದಲ್ಲಿ 442 ಹುಲಿಗಳಿವೆ. 

2014ರ ಗಣತಿಯಲ್ಲಿ ದೇಶದಲ್ಲಿ 2,226 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. 2014ರ ಗಣತಿಯಲ್ಲಿ ಕರ್ನಾಟಕದಲ್ಲಿ 406 ಹುಲಿಗಳಿವೆ ಎಂದು ಲೆಕ್ಕಹಾಕಲಾಗಿತ್ತು. ಇದು ದೇಶದಲ್ಲೇ ಹೆಚ್ಚು. ಕರ್ನಾಟಕದ ನಂತರ ಹೆಚ್ಚು ಹುಲಿಗಳಿರುವ ರಾಜ್ಯಗಳಾಗಿ ಉತ್ತರಾಖಂಡ (340) ಮತ್ತು ಮಧ್ಯಪ್ರದೇಶ (308) ಹೊರಹೊಮ್ಮಿದ್ದವು. 

‘ಹುಲಿಗಳ ಸಂಖ್ಯೆ ಎರಡು ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕ್ಕಾಗಿ ಒಂಬತ್ತು ವರ್ಷಗಳ ಹಿಂದೆ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಿರ್ಧರಿಸಲಾಗಿತ್ತು. ಇದಕ್ಕಾಗಿ 2022ರ ಗಡಿ ಹಾಕಿಕೊಳ್ಳಲಾಗಿತ್ತು. ಆದರೆ, ನಾವು ಭಾರತದಲ್ಲಿ ನಾಲ್ಕು ವರ್ಷ ಮುಂಚಿತವಾಗಿಯೇ ಆ ಗುರಿಯನ್ನು ತಲುಪಿದ್ದೇವೆ’ ಎಂದು ಪ್ರಧಾನಿ ಹೇಳಿದರು. 

(ಭಾರತದ ಮಾಜಿ ಕ್ರಿಕೆಟಿಗೆ ಅನಿಲ್‌ ಕುಂಬ್ಳೆ ಪ್ರತಿಕ್ರಿಯೆ)

ಬಿಡುಗಡೆಯಾಗಿರುವ ಹುಲಿ ಗಣತಿ ವರದಿಯು ಪ್ರತಿಯೊಬ್ಬ ಭಾರತೀಯ ಹಾಗೂ ಪರಿಸರ ಪ್ರಿಯರನ್ನೂ ಸಂತಸ ತರಲಿದೆ ಎಂದರು. ‌

2006ರಿಂದ ವೈಜ್ಞಾನಿಕ ರೀತಿಯಲ್ಲಿ ಹುಲಿಗಳ ಎಣಿಕೆ ಕಾರ್ಯ ನಡೆಸಲಾಗುತ್ತಿದೆ. 2006ರಲ್ಲಿ ದೇಶದಲ್ಲಿ 1411 ಹುಲಿಗಳು ಇರುವುದಾಗಿ ಗುರುತಿಸಲಾಗಿತ್ತು. ಪ್ರಸ್ತುತ ವರದಿಯ ಪ್ರಕಾರ, ಆ ಸಂಖ್ಯೆ ಈಗ ದ್ವಿಗುಣಗೊಂಡಿದೆ. 

2006, 2010, 2014 ಹಾಗೂ 2018ರಲ್ಲಿ ಗಣತಿ ನಡೆಸಲಾಗಿತ್ತು. ಹುಲಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಪರಿಣಾಮ ಈ ವರದಿಯಿಂದ ತಿಳಿಯಬಹುದಾಗಿದೆ.

ಈ ಬಾರಿ ಗಣತಿಗೆ 14,000 ಕ್ಯಾಮರಾ ಟ್ರ್ಯಾಪ್‌ಗಳನ್ನು ಬಳಸಲಾಗಿತ್ತು. 2014ರಲ್ಲಿ ಇಂತಹ ಕ್ಯಾಮೆರಾಗಳ ಸಂಖ್ಯೆ 9,735 ಇತ್ತು.

ಅರಣ್ಯ ಮತ್ತು ಪರಿಸರ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಮತ್ತು ಕೇಂದ್ರ ರಾಜ್ಯಸಚಿವ ಬಾಬುಲಾಲ್‌ ಸುಪ್ರಿಯೊ ಸಹ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇನ್ನಷ್ಟು...

ಹುಲಿ... ಜಾಗೃತಿ ಇರಲಿ
ಪ್ರಪಂಚದ 13 ದೇಶಗಳ ಕಾಡುಗಳಲ್ಲಿ ಮಾತ್ರ ಹುಲಿಗಳು ಕಂಡು ಬರುತ್ತವೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು ಏಷ್ಯಾ ಖಂಡದಲ್ಲೇ..
https://bit.ly/2Om1Aib

ಹುಲಿ ಸಂರಕ್ಷಣೆಗೆ ‘ಕಾಡು’
‘ಕಾಡು’, ಹುಲಿ ಸಂರಕ್ಷಣೆ ಉದ್ದೇಶಕ್ಕಾಗಿಯೇ ತಯಾರಿಸಿದ ಭಾರತದ ಮೊದಲ ವೈನ್. 
https://bit.ly/2YqfnnN

ಎಲ್ಲೋ ಹುಲಿರಾಯ ನಿನ್ನ ಅರಮನೆ?!
ಬೇಟೆಯನ್ನೇ ಕಸುಬಾಗಿಸಿಕೊಂಡಿದ್ದ ಆತನಿಗೆ ನಿಧಾನಗತಿಯಲ್ಲಿ ಹುಲಿ ಸಂತತಿ ಅವಸಾನದತ್ತ ಸಾಗುತ್ತಿರುವುದು ಆತಂಕ ತಂದಿತು. 
https://bit.ly/2SKwWxG

ಬಂಡೀಪುರ: ಕಳ್ಳಬೇಟೆಗೆ ಬಿದ್ದಿದೆ ಕಡಿವಾಣ
ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡ ಹುಲಿಯನ್ನು ಕತ್ತಿನ ಭಾಗದಲ್ಲಿ ಚುಚ್ಚಿ ಕೊಂದು ಬಳಿಕ ಚರ್ಮವನ್ನು ತೆಗೆದುಕೊಂಡು ಹೋಗುತ್ತಿದ್ದರು. ಕಾಳ ಸಂತೆಯಲ್ಲಿ ಹುಲಿಯ ಉಗುರು, ಹಲ್ಲು, ಮೂಳೆಗಳಿಗೆ ಬೇಡಿಕೆ ಇದೆ.
https://bit.ly/2K9lzLD

ಹುಲಿಯ ಜಾಡಿನಲ್ಲಿ...
ಜಿನುಗುತ್ತಿದ್ದ ಮಳೆಯ ಹನಿಗಳ ಸದ್ದಿನ ನಡುವೆ, ನಾನು ಹುಲಿಯ ಸುಳಿವಿಗಾಗಿ ಕಾತರಿಸುತ್ತಿದ್ದೆ. ಬಹಳ ಸಮಯವೇ ಕಳೆಯಿತು. ಹುಲಿ ಮತ್ತೆ ಗರ್ಜಿಸಬಹುದೆಂದು ಎದುರು ನೋಡುತ್ತಿದ್ದಾಗ...
https://bit.ly/2Kc9WU2

ನರಭಕ್ಷಕನ ಸುತ್ತ; ಮುಗಿಯದ ವೃತ್ತ
ಅದು ದೈಹಿಕವಾಗಿ ಸಂಪೂರ್ಣ ಕುಗ್ಗಿತ್ತು. ತನ್ನ ಬಂಧನವನ್ನು ಪ್ರತಿಭಟಿಸಲು ಅದಕ್ಕೆ ಹೆಚ್ಚಿನ ತ್ರಾಣವಿರಲಿಲ್ಲ. ಒಂದೆರಡು ದಿನಗಳಲ್ಲಿ ಅದು ಬಂಧನದಲ್ಲಿಯೇ ಸಾವನ್ನಪ್ಪಿತು. 
https://bit.ly/2K1tVpP

ಹುಲಿಯ ಹೆಜ್ಜೆ ಹಿಡಿದು...
ಹುಲಿಯನ್ನು ಬರಿ ಕಣ್ಣಿನಲ್ಲಿ ನೋಡಿ ಆನಂದಿಸುವುದು ಒಂದು ಅನುಭವವಾದರೆ, ಕ್ಯಾಮೆರಾದ 300 ಎಂಎಂ ಲೆನ್ಸ್ ಮೂಲಕ ಹತ್ತಿರದಿಂದ ನೋಡುತ್ತಾ ಕ್ಲಿಕ್ಕಿಸುವ ಆನಂದವೇ ಬೇರೆ!
https://bit.ly/2Kc9CVn

ಹುಲಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ
2018ರ ಜನವರಿಯಲ್ಲಿ ರಾಷ್ಟ್ರದ ಎಲ್ಲೆಡೆ ನಡೆದಂತೆ ವನ್ಯಧಾಮದ ಆರು ವಲಯಗಳಲ್ಲಿ 9 ದಿನ ಹುಲಿಗಣತಿ ನಡೆದಿತ್ತು. 
https://bit.ly/32WT6Bc

ಪ್ರತಿಕ್ರಿಯಿಸಿ (+)