ಗುರುವಾರ , ಅಕ್ಟೋಬರ್ 22, 2020
24 °C

ಈ ಸೋಲು ನನಗೆ ಸಿಕ್ಕಿದ ಪ್ರಖರ ಹೊಡೆತ: ಪ್ರಕಾಶ್ ರಾಜ್ ಟ್ವೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಈ ಸೋಲು ತನಗೆ ಸಿಕ್ಕಿದ ಪ್ರಖರ ಹೊಡೆತ ಎಂದಿದ್ದಾರೆ.

ಚುನಾವಣೆಯಲ್ಲಿನ ಸೋಲು ನನ್ನ ಮುಖಕ್ಕೆ ಸಿಕ್ಕಿದ ಪ್ರಖರ ಹೊಡೆತ, ಮತ್ತಷ್ಟು ಅವಮಾನಿತ, ಟ್ರೋಲ್ ಮತ್ತು ತೇಜೋವಧೆಗೊಳಗಾಗಲಿದ್ದೇನೆ ಎಂದು ತಿಳಿದಿದೆ. ನಾನು ನನ್ನ ನಿಲುವಿನಲ್ಲಿ ದೃಢವಾಗಿದ್ದೇನೆ. ಜಾತ್ಯಾತೀತ ಭಾರತಕ್ಕಾಗಿರುವ ನನ್ನ ಹೋರಾಟ ಮುಂದುವರಿಯಲಿದೆ. ಕಠಿಣ ಪಯಣ ಈಗಷ್ಟೇ ಶುರುವಾಗಲಿದೆ. ಈ ಪಯಣದಲ್ಲಿ ನನ್ನೊಂದಿಗೆ ಇದ್ದವರಿಗೆ ಧನ್ಯವಾದಗಳು ಎಂದು ಪ್ರಕಾಶ್ ರಾಜ್ ಟ್ವೀಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು