ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು...

Last Updated 7 ಮೇ 2020, 11:15 IST
ಅಕ್ಷರ ಗಾತ್ರ

ನವದೆಹಲಿ:ರಾಸಾಯನಿಕ (ಕೈಗಾರಿಕೆ) ಅವಘಡಗಳು ಸಂಭವಿಸಿದಾಗ ಹಾಗೂ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು...

* ಗಾಬರಿಯಾಗಬೇಡಿ, ನಿಗದಿಪಡಿಸಿರುವ ನಿರ್ಗಮನ ದಾರಿಯ ಮೂಲಕ ಶಾಂತವಾಗಿ ಮತ್ತು ತ್ವರಿತವಾಗಿ ಸ್ಥಳಾಂತರಗೊಳ್ಳಿ

* ಸ್ಥಳಾಂತರಗೊಳ್ಳುವಾಗ ಒದ್ದೆಯಾದ ಕರವಸ್ತ್ರ, ಬಟ್ಟೆ ಅಥವಾ ಸೀರೆಯಿಂದಮುಖವನ್ನು ಮುಚ್ಚಿಕೊಳ್ಳಿ.

* ಸ್ಥಳಾಂತರಿಸಲು ಸಾಧ್ಯವಾಗದೇ ಇರುವಅನಾರೋಗ್ಯ ಪೀಡಿತರು, ವೃದ್ಧರು, ದುರ್ಬಲರು, ಅಂಗವಿಕಲರನ್ನು ಮನೆಯಲ್ಲೇಇರಿಸಿ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಭದ್ರವಾಗಿಮುಚ್ಚಬೇಕು.

* ಮುಚ್ಚಿಡದ ಆಹಾರ / ನೀರನ್ನು ಸೇವಿಸಬೇಡಿ. ಬಾಟಲಿಯಿಂದ ಮಾತ್ರ ನೀರುಕುಡಿಯಿರಿ

* ಸುರಕ್ಷಿತ ಸ್ಥಳಗಳಿಗೆ ತಲುಪಿದ ಬಳಿಕ ಉಡುಪುಗಳನ್ನು ಬದಲಿಸಿ ಮತ್ತು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ

* ಸುರಕ್ಷಿತ ಸ್ಥಳಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗ, ಪೊಲೀಸ್ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಕ್ರಮವಾಗಿ 101, 100 ಮತ್ತು 108 ಸಂಖ್ಯೆಗೆ ಕರೆ ಮಾಡಿ.

* ಜಿಲ್ಲಾಡಳಿತ / ಅಗ್ನಿಶಾಮಕ / ಆರೋಗ್ಯ / ಪೊಲೀಸ್ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿರುವ ಸಲಹೆಗಳನ್ನು ಪಡೆಯುತ್ತಿರಿ. ಹಾಗೂ ಸ್ಥಳೀಯ ರೇಡಿಯೋ, ಟಿವಿ ಚಾನೆಲ್‌ಗಳನ್ನು ಗಮನಿಸುತ್ತಿರಬೇಕು.

* ಸರ್ಕಾರಿ ಅಧಿಕಾರಿಗಳಿಗೆ ಸರಿಯಾದ ಮತ್ತು ನಿಖರವಾದ ಮಾಹಿತಿಯನ್ನು ನೀಡಿ

* ಸಾರ್ವಜನಿಕ ಸಭೆ, ಖಾಸಗಿ ಸಮಾರಂಭ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿನ ಜನರಿಗೆ ತ್ವರಿತವಾಗಿಮಾಹಿತಿ ನೀಡಿ (ಶಾಲೆ, ಶಾಪಿಂಗ್ ಸೆಂಟರ್, ಥಿಯೇಟರ್ ಇತ್ಯಾದಿ)

* ವದಂತಿಗಳಿಗೆ ಕಿವಿ ಕೊಡಬೇಡಿ ಮತ್ತು ವದಂತಿಗಳನ್ನುಹರಡಬೇಡಿ.

ಮಾಹಿತಿ ಮೂಲ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತ ಸರ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT