ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ಅತ್ಯಾಚಾರಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ 

Last Updated 5 ಫೆಬ್ರುವರಿ 2020, 15:31 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಆಕ್ಷಯ್‌ ಕುಮಾರ್‌ ಸಿಂಗ್‌ ಎಂಬಾತ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಬುಧವಾರ ತಿರಸ್ಕರಿಸಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಪ್ರಕರಣದ ಇನ್ನಿತರ ಅಪರಾಧಿಗಳಾದ ಮುಖೇಶ್‌ ಸಿಂಗ್‌ ಮತ್ತು ವಿನಯ್‌ ಕುಮಾರ್‌ ಶರ್ಮಾ ಅವರ ಕ್ಷಮಾದಾನದ ಅರ್ಜಿಯನ್ನೂ ರಾಷ್ಟ್ರಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಅಕ್ಷಯ್‌ ಕುಮಾರ್‌ ಸಿಂಗ್‌ ಇತ್ತೀಚೆಗೆ ತಾನೂ ಪ್ರತ್ಯೇಕವಾಗಿಅರ್ಜಿಸಲ್ಲಿಸಿದ್ದ. ಆದರೆ, ಅದನ್ನುರಾಷ್ಟ್ರಪತಿಗಳು ತಳ್ಳಿಹಾಕಿದ್ದಾರೆ.

ಈ ಮಧ್ಯೆ ಅಪರಾಧಿಗಳನ್ನು ಪ್ರತ್ಯೇಖವಾಗಿ ಗಲ್ಲಿಗೇರಿಸಲು ಅವಕಾಶವಿಲ್ಲ ಎಂಬ ದೆಹಲಿ ಹೈಕೋರ್ಟ್‌ನ ಬುಧವಾರದ ತೀರ್ಪನ್ನು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ.

ಅಪರಾಧಿಗಳು ಕಾನೂನಿನ ಮಾರ್ಗಗಳನ್ನು ಪ್ರತ್ಯೇಕವಾಗಿ ಪ್ರಯೋಗಿಸುತ್ತಾ, ಶಿಕ್ಷೆ ವಿಳಂಬವಾಗುವಂತೆ ನೋಡಿಕೊಳ್ಳುತ್ತಿದ್ದಾರೆಎಂಬ ವಾದ ಕೇಳಿ ಬಂದಿದೆ. ಕೋರ್ಟ್‌ ಕೂಡ ಈ ವಾದವನ್ನು ನಿರ್ವಿವಾದ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT