ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭಾ ಚುನಾವಣೆ ಫಲಿತಾಂಶ: ಆಂಧ್ರದಲ್ಲಿ ವೈಎಸ್‌ಆರ್‌ಸಿಪಿಯ ನಾಲ್ವರೂ ಆಯ್ಕೆ

Last Updated 19 ಜೂನ್ 2020, 13:57 IST
ಅಕ್ಷರ ಗಾತ್ರ

ನವದೆಹಲಿ:ಮಧ್ಯಪ್ರದೇಶ, ಗುಜರಾತ್‌, ರಾಜಸ್ಥಾನ, ಮಣಿಪುರ ಸೇರಿದಂತೆ 8 ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭಾ ಸೀಟುಗಳಿಗೆ ಮತದಾನ ಪ್ರಕ್ರಿಯೆ ನಡೆದಿದ್ದು ಫಲಿತಾಂಶ ಪ್ರಕಟವಾಗುತ್ತಿದೆ.

ಕೊರೊನಾ ಸಂಕಷ್ಟದ ನಡುವೆ ನಡೆದ ಈ ಚುನಾವಣೆಯಲ್ಲಿ ಗುಜರಾತ್, ಮಧ್ಯಪ್ರದೇಶ ಮತ್ತುರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಒಟ್ಟು 19 ಸೀಟುಗಳಿಗಾಗಿ ಮತದಾನ ನಡೆದಿದೆ.

ಕ್ಷಣ ಕ್ಷಣದ ಮಾಹಿತಿ

* ರಾಜಸ್ಥಾನದಿಂದ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ನೀರಜ್ ಡಾಂಗಿ, ಬಿಜೆಪಿಯಿಂದ ರಾಜೇಂದ್ರ ಗೆಹ್ಲೊಟ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

* ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ, ಸಮರ್ ಸಿಂಗ್ ಸೋಲಂಕಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನಿಂದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

* ಆಂಧ್ರ ಪ್ರದೇಶದಿಂದ ವೈಎಸ್‌ಆರ್‌ ಕಾಂಗ್ರೆಸ್‌ ಪ‍ಕ್ಷದ ನಾಲ್ವರೂ ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ 2, ಕಾಂಗ್ರೆಸ್ 1 ಸ್ಥಾನಗಳನ್ನು ಗೆದ್ದುಕೊಂಡಿವೆ. ರಾಜಸ್ಥಾನದಿಂದ ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ 1ರಲ್ಲಿ ಜಯ ಸಾಧಿಸಿದೆ.

ರಾಜಸ್ಥಾನದಲ್ಲಿ ಮೂರು ಸೀಟುಗಳಿಗೆ ಚುನಾವಣೆ

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂಣಿಯ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಮೊದಲಾದವರು ಬೆಳಗ್ಗೆ ಮತದಾನ ಮಾಡಿದ್ದಾರೆ. 9 ಗಂಟೆ ಆರಂಭವಾದ ಮತದಾನ ಪ್ರಕ್ರಿಯೆ 4 ಗಂಟೆವರೆಗೆ ನಡೆಯಲಿದೆ. 5 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ .

ಗುಜರಾತಿನಲ್ಲಿ ಮತದಾನ ಬಹಿಷ್ಕರಿಸಿದ ಬಿಟಿಪಿ
ಗುಜರಾತಿನ ನಾಲ್ಕು ರಾಜ್ಯಸಭಾ ಸೀಟುಗಳಿಗೆ ಶುಕ್ರವಾರ ಬೆಳಗ್ಗೆ ಮತದಾನ ಆರಂಭವಾಗಿದೆ. ಬುಡಕಟ್ಟು ಜನಾಂಗ, ವಲಸೆಗಾರರು ಮತ್ತು ದಲಿತರ ಅಭಿವೃದ್ಧಿ ಮಾಡುವುದಾಗಿ ಲಿಖಿತ ಭರವಸೆ ಕೊಡುವವರೆಗೂ ನಾವು ಮತದಾನ ಮಾಡಲ್ಲ ಎಂದು ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ಯ ಇಬ್ಬರು ಶಾಸಕರು ಹೇಳಿದ್ದು, ಮತದಾನ ಬಹಿಷ್ಕರಿಸಿದ್ದಾರೆ. ಬಿಟಿಪಿ ಮುಖ್ಯಸ್ಥ ಚೋಟುವಾಸವ ಮತ್ತು ಅವರ ಪುತ್ರ ಮಹೇಶ್ ವಾಸವ ಮತದಾನ ಮಾಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ:ಕುತೂಹಲ ಕೆರಳಿಸಿದ ರಾಜ್ಯಸಭಾ ಚುನಾವಣೆ

ಆಂಧ್ರಪ್ರದೇಶದಲ್ಲಿನ 4 ಸೀಟುಗಳಿಗೆ ಚುನಾವಣೆ
ವೈಎಸ್‌ಆರ್‌ಸಿಪಿಯಿಂದ ಮೋಪಿದೇವಿ ವೆಂಕಟ್ರಮಣ, ಪಿಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ಉದ್ಯಮಿ ಅಲ್ಲಾಅಯೋಧ್ಯಾರಾಮಿ ರೆಡ್ಡಿ ಮತ್ತು ಪರಿಮಳ ನಥವಾನಿ ಸ್ಪರ್ಧಿಸುತ್ತಿದ್ದಾರೆ.ಟಿಡಿಪಿಯಿಂದ ಅಧಿಕೃತವಾಗಿ 23 ಶಾಸಕರು ( ಇದರಲ್ಲಿ ಮೂವರು ವೈಎಸ್‌ಆರ್‌ಸಿಪಿ ಸೇರಿದ್ದಾರೆ) ಅವರ ಅಭ್ಯರ್ಥಿಯಾಗಿ ವರಳಾ ರಾಮಯ್ಯ ಅವರನ್ನು ಕಣಕ್ಕಿಳಿಸಿದ್ದಾರೆ. 151 ಶಾಸಕರಿರುವ ಆಡಳಿತರೂಢ ಪಕ್ಷವು ಎಲ್ಲ ಸೀಟುಗಳನ್ನು ಗೆಲ್ಲುವ ಭರವಸೆ ಹೊಂದಿದೆ.

ಜಾರ್ಖಂಡ್‌ನಲ್ಲಿ 2 ಸೀಟುಗಳಿಗೆ ಚುನಾವಣೆ
ಜೆಎಂಎಂ ಸಂಸ್ಥಾಪಕ ಮತ್ತು ಮಾಜಿ ಸಚಿವ ಶಿಬು ಸೊರೇನ್, ಕಾಂಗ್ರೆಸ್ ನಾಯಕ ಶಹಜಾದಾ ಅನ್ವರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ ಮತ್ತು ಇತರ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. 9 ಗಂಟೆಗೆ ಮತದಾನ ಆರಂಭವಾಗಿದ್ದು 4 ಗಂಟೆ ವರೆಗೆ ಮುಂದುವರಿಯಲಿದೆ.

ಮಧ್ಯಪ್ರದೇಶದಲ್ಲಿ ಮೂರು ಸೀಟುಗಳಿದ್ದು,ಶುಕ್ರವಾರ ಬೆಳಗ್ಗೆ ರಾಜ್ಯ ವಿಧಾನಸಭಾ ಕಟ್ಟಡದಲ್ಲಿ ಮತದಾನ ಆರಂಭವಾಗಿದೆ

ಮೇಘಾಲಯದಲ್ಲಿ ಮತದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT