ಮಂಗಳವಾರ, ಜನವರಿ 21, 2020
27 °C

ರಾಹುಲ್ ಭಾಷಣವನ್ನು ಮಲಯಾಳಂಗೆ ತರ್ಜುಮೆ ಮಾಡಿದ ವಿದ್ಯಾರ್ಥಿನಿ ಸಫಾಗೆ ಶ್ಲಾಘನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Safa Fabin translates Rahul Gandhi’s speech

ಮಲಪ್ಪುರಂ: ನಾನು ಇಂಗ್ಲಿಷ್‌ನಲ್ಲಿ ಮಾತನಾಡಲಿದ್ದೇನೆ. ನನ್ನ ಭಾಷಣವನ್ನು ಅನುವಾದ ಮಾಡಲು ಯಾರಾದರೂ ಮುಂದೆ ಬಂದರೆ ಚೆನ್ನಾಗಿರುತ್ತಿತ್ತು. ನಾನು ಹೇಳಿದ್ದನ್ನು ತರ್ಜುಮೆ ಮಾಡಲು ವಿದ್ಯಾರ್ಥಿಗಳು ಯಾರಾದರೂ ಇದ್ದೀರಾ?  ಎಂದು ಕಾಂಗ್ರೆಸ್ ನೇತಾರ, ವಯನಾಡ್ ಸಂಸದ ರಾಹುಲ್ ಗಾಂಧಿ ಕೇಳಿದಾಗ ಮುಂದೆ ಬಂದಿದ್ದು ಸಫಾ ಫೆಬಿನ್ ಎಂಬ ವಿದ್ಯಾರ್ಥಿನಿ. 

ಮಲಪ್ಪುರಂ ಜಿಲ್ಲೆಯ ಕರುವಾರಕ್ಕುಂಡ್  ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸಯನ್ಸ್ ಲ್ಯಾಬ್ ಕಟ್ಟಡ ಉದ್ಘಾಟನೆಗಾಗಿ ಗುರುವಾರ ರಾಹುಲ್ ಗಾಂಧಿ ಆಗಮಿಸಿದ್ದರು. ಈ ವೇಳೆ ತನ್ನ ಭಾಷಣ ಅನುವಾದ ಮಾಡಲು ಮುಂದೆ ಬಂದ ವಿದ್ಯಾರ್ಥಿನಿಗೆ ಅಭಿನಂದನೆ ಹೇಳಿ ರಾಹುಲ್ ಭಾಷಣ ಆರಂಭಿಸಿದ್ದರು. 

ರಾಹುಲ್ ಇಂಗ್ಲಿಷ್‌ನಲ್ಲಿ ಭಾಷಣ ಮಾಡುತ್ತಿದ್ದಂತೆ ಸಫಾ ಮಲಯಾಳಂನಲ್ಲಿ ಅನುವಾದ ಮಾಡಿದಳು. ರಾಹುಲ್ ಇಂಗ್ಲಿಷ್‌ನಲ್ಲಿ ಒಂದು ವಾಕ್ಯ ಹೇಳಿ ನಿಲ್ಲಿಸುತ್ತಿದ್ದಂತೆ ಸ್ವಲ್ಪವೂ ತಡವರಿಸದೆ ಸಫಾ ಅದರ ಅನುವಾದವನ್ನು ಮಾಡಿದ್ದಳು.

ಭಾಷಣದ ನಂತರ ಸಫಾಳ ಪ್ರತಿಭೆಯನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯಾರ್ಥಿನಿಯ ಆತ್ಮವಿಶ್ವಾಸ ಮತ್ತು ಅನುವಾದ ಮಾಡುವ ಕಲೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ನಾನು ಇದೇ ಮೊದಲ ಬಾರಿ ಭಾಷಣ ಅನುವಾದ ಮಾಡಿದ್ದೆ. ರಾಹುಲ್ ಗಾಂಧಿ ಇಷ್ಟ. ಭಾಷಣವನ್ನು ಈ  ರೀತಿ ಅನುವಾದ ಮಾಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎನ್ನುವ ಸಫಾ 12 ನೇ ತರಗತಿ ಸಯನ್ಸ್ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ. 

ಇದನ್ನೂ ಓದಿ:  ಸಚಿವರದ್ದು ಅಹಂಕಾರದ ಮಾತು: ರಾಹುಲ್‌ ಗಾಂಧಿ ವಾಗ್ದಾಳಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು