ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರಮಿಕ ರೈಲು’ ಬೇಡಿಕೆ ಕುಸಿತ

Last Updated 3 ಜೂನ್ 2020, 21:21 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಬೇರೆಬೇರೆ ರಾಜ್ಯಗಳಲ್ಲಿ ಸಿಲುಕಿ ಕೊಂಡಿದ್ದ ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ್ದ ‘ಶ್ರಮಿಕ ವಿಶೇಷ ರೈಲು’ಗಳಿಗೆ ರಾಜ್ಯಗಳಿಂದ ಈಗ ಬೇಡಿಕೆ ಕಡಿಮೆಯಾಗಿದೆ.

ಮೇ 1ರಿಂದ ಈ ಸೇವೆಯನ್ನು ಆರಂಭಿಸಿದ್ದ ರೈಲ್ವೆ ಇಲಾಖೆಯು ಈವರೆಗೆ 4,197 ರೈಲುಗಳ ಮೂಲಕ 57 ಲಕ್ಷಕ್ಕೂ ಹೆಚ್ಚು ಜನರನ್ನು ತಮ್ಮ ಊರುಗಳಿಗೆ ತಲುಪಿಸಿದೆ. ಈವರೆಗೆ ಒಟ್ಟು 256 ರೈಲುಗಳನ್ನು ರದ್ದುಪಡಿಸಲಾಗಿದೆ.

ಅತಿ ಹೆಚ್ಚು ರೈಲುಗಳನ್ನು ರದ್ದುಪಡಿಸಿದ ರಾಜ್ಯಗಳಲ್ಲಿ ಮಹಾರಾಷ್ಟ್ರ (105), ಗುಜರಾತ್‌ (47), ಕರ್ನಾಟಕ (38) ಹಾಗೂ ಉತ್ತರಪ್ರದೇಶ (30) ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರತಿ ರೈಲಿನಲ್ಲಿ ಕನಿಷ್ಠ 1,000ದಿಂದ 1,200 ಪ್ರಯಾಣಿಕರು ಇರಲೇಬೇಕು. ಇಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಲಭಿಸದ ಕಾರಣ ಅನೇಕ ರೈಲು ಗಳನ್ನು ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT