ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಆನೆ ದುರಂತಕ್ಕೆ ಮರುಗಿದ ದೇಶ

Last Updated 4 ಜೂನ್ 2020, 17:33 IST
ಅಕ್ಷರ ಗಾತ್ರ

ಕೇರಳದ ಗರ್ಭಿಣಿ ಆನೆಯ ದುರಂತಕ್ಕೆ ಇಡೀ ದೇಶವೇ ಮಮ್ಮಲ ಮರುಗಿದೆ. ಆನೆ ಮತ್ತು ಇನ್ನೂ ಜಗತ್ತನ್ನೇ ನೋಡದ ಅದರ ಮರಿಯ ಸಾವಿಗೆ ಸಾಮಾಜಿಕ ತಾಣಗಳಲ್ಲಿ ಅಸಂಖ್ಯ ಮಂದಿ ಕಂಬನಿ ಮಿಡಿದಿದ್ದಾರೆ.

ಸೆಲೆಬ್ರೆಟಿಗಳು, ಟ್ವಿಟರ್‌, ಫೇಸ್‌ಬುಕ್‌ ಬಳಕೆದಾರರು ಆನೆಯ ಚಿತ್ರ ಹಂಚಿಕೊಂಡು ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದು ಉದ್ದೇಶಪೂರ್ವಕ ಕೊಲೆ ಎಂದು ಉದ್ಯಮಿ ರತನ್‌ ಟಾಟಾ ಅವರು ಟ್ವಿಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಾಣಿಗಳನ್ನು ಪ್ರೀತಿಯಿಂದ ಕಾಣೋಣ. ಇಂಥ ಹೇಯ ಕೃತ್ಯಗಳಿಗೆ ಕೊನೆ ಹಾಡೋಣ ಎಂದು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್‌ ಆಚಾರ್ಯ ಅವರ ಗೆರೆಗಳಲ್ಲಿ ಮೂಡಿ ಬಂದ ಆನೆ ಮತ್ತು ಅದರ ಮಗುವಿನ ನಡುವಿನ ಸಂಭಾಷಣೆಯ ಚಿತ್ರ ದೇಶದಾದ್ಯಂತ ವೈರಲ್‌ ಆಗಿದೆ. ಅದು ಹಲವರ ವಾಟ್ಸಾಪ್‌ ಪ್ರೊಫೈಲ್‌ ಚಿತ್ರವೂ ಆಗಿತ್ತು.

ನಟಿ ಶ್ರದ್ಧಾ ಕಪೂರ್‌ ಕೂಡ ಟ್ವೀಟ್‌ ಮಾಡಿದ್ದು, ‘ಇದು ನಡೆದಿದ್ದಾರೂ ಹೇಗೆ, ಈ ರೀತಿಯ ಏನಾದರೂ ಸಂಭವಿಸುವುದಾದೂ ಹೇಗೆ? ಜನರಿಗೆ ಹೃದಯವಿಲ್ಲವೇ? ನನ್ನ ಹೃದಯ ಚೂರುಚೂರಾಗಿದೆ. ಅಪರಾಧಿಗಳಿಗೆ ಕಠಿಣ ರೀತಿಯ ಶಿಕ್ಷೆ ವಿಧಿಸಬೇಕಿದೆ,’ ಎಂದು ಅವರು ಆಗ್ರಹಿಸಿದ್ದಾರೆ.

‘ಈ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು,’ ಎಂದು ನಟ ರಂದೀಪ್‌ ಹೂಡಾ ಒತ್ತಾಯಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಲಾಗಿದೆ ಎಂದು ಟ್ವೀಟ್‌ ಮಾಡಿರುವ ಕೇರಳ ಅರಣ್ಯ ಇಲಾಖೆ, ನಮ್ಮ ಕರ್ತವ್ಯ ಮತ್ತು ಮಾನವೀಯತೆ ಎಲ್ಲಿ ಮರೆಯಾಗಿದೆ ಎಂದೂ ಪ್ರಶ್ನೆ ಮಾಡಿದೆ.

‘ನೋವಿನೊಂದಿಗೆ ಹಳ್ಳಿಗಳ ರಸ್ತೆಗಳಲ್ಲಿ ಓಡಾಡುತ್ತಿದ್ದರೂ ಅವಳು ಯಾರೊಬ್ಬರನ್ನೂ ಏನೂ ಮಾಡಲಿಲ್ಲ. ಏಕೆಂದರೆ ಆಕೆ ಒಳ್ಳೆತನಗಳಿಂದ ಕೂಡಿದ್ದಳು,’ ಎಂದು ಸುದ್ದಿ ನಿರೂಪಕಿ ಪೌಲೋಮಿ ಶಾ ಟ್ವೀಟ್‌ ಮಾಡಿದ್ದಾರೆ.

ಇನ್ನಷ್ಟು ಟ್ವೀಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT