‘ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದಾಳೆ, ದಯವಿಟ್ಟು ಹುಡುಕಿಕೊಡಿ’!

ನಾಗಪುರ (ಮಹಾರಾಷ್ಟ್ರ): ‘ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದಾಳೆ, ದಯವಿಟ್ಟು ಆ ಹೃದಯವನ್ನು ಹುಡುಕಿಕೊಡಿ’ ಎಂದು ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ!
ಕಳವಾದ ವಸ್ತುಗಳನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಪೊಲೀಸರಿಗೆ ದೂರುಗಳು ಬರುವುದು ಸಹಜ. ಆದರೆ, ಯುವಕನ ಈ ವಿಚಿತ್ರ ದೂರಿನಿಂದ ಅವಾಕ್ಕಾದ ಪೊಲೀಸರು ಏನು ಮಾಡಬೇಕೆಂದು ತೋಚದೆ ಮೇಲಧಿಕಾರಿಯ ಸಲಹೆ ಕೋರಿದರು.
ಈ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದ ಮೇಲಧಿಕಾರಿ, ಈ ಬಗೆಯ ಪ್ರಕರಣ ದಾಖಲಿಸಿಕೊಳ್ಳಲು ಭಾರತೀಯ ಕಾನೂನಿನಲ್ಲಿ ಯಾವುದೇ ಕಾಯ್ದೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. ಬಳಿಕ, ನಿನ್ನ ದೂರಿಗೆ ನಮ್ಮ ಬಳಿ ಪರಿಹಾರ ಇಲ್ಲ ಎಂದು ತಿಳಿಸಿ ಪೊಲೀಸರು ಯುವಕನನ್ನು ಸಾಗಹಾಕಿದರು.
ಕಳವಾಗಿದ್ದ ₹82 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ, ಪೊಲೀಸ್ ಆಯುಕ್ತ ಭೂಷಣ್ ಕುಮಾರ್ ಉಪಾಧ್ಯಾಯ ಈ ಪ್ರಕರಣವನ್ನು ಹಂಚಿಕೊಂಡರು.
‘ಕಳವಾದ ವಸ್ತುಗಳನ್ನು ನಾವು ಮರಳಿ ದೊರಕಿಸಿಕೊಡಬಹುದು. ಆದರೆ, ಕೆಲವೊಮ್ಮೆ ನಾವು ಪರಿಹರಿಸಲಾಗದಂತಹ ದೂರುಗಳೂ ನಮಗೆ ಬರುತ್ತವೆ’ ಎಂದು ನಗುತ್ತಾ, ಯುವಕನ ಬೇಡಿಕೆ ಉದಾಹರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.