ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ ಹಾಕಿ ಪ್ರಾರ್ಥನೆ ಸಲ್ಲಿಸುವುದನ್ನು ಈಗಲಾದರೂ ನಿಲ್ಲಿಸಿ: ಜಾವೇದ್ ಅಖ್ತರ್

Last Updated 11 ಮೇ 2020, 10:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅಜಾನ್ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ, ಅದೊಂದು ಗ್ಯಾಜೆಟ್ ಅಲ್ಲ, ಮತ್ತೊಬ್ಬರಿಗೆ ಧಕ್ಕೆಯಾಗುವ ಧ್ವನಿವರ್ಧಕಗಳನ್ನು ಬಳಸಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಬೇಕು ಎಂದುಹಿರಿಯ ಬರಹಗಾರ ಗೀತರಚನೆಕಾರ ಜಾವೇದ್ ಅಖ್ತರ್ ಹೇಳಿದ್ದು, ಟ್ವೀಟ್ ಮಾಡಿದ್ದಾರೆ.

ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ಮಾಡಿದ್ದು, ಭಾರತದಲ್ಲಿ ಸುಮಾರು 50 ವರ್ಷಗಳ ಕಾಲ ಅಜಾನ್ ಹರಾಮ್ ಎಂದು ಪರಿಗಣಿಸಲಾಗಿತ್ತು.ನಂತರ ಅದನ್ನು ಅನುಮತಿಸಲಾಯಿತು. ಇದಕ್ಕೆ ಅಂತ್ಯವಿಲ್ಲ .ಆದರೆ, ಇದಕ್ಕೊಂದು ಅಂತ್ಯವಿರಬೇಕು. ಅಜಾನ್ ಚೆನ್ನಾಗಿದೆ ಆದರೆ ಮೈಕ್ ಹಾಕಿ ಕೂಗುವುದು ಮತ್ತೊಬ್ಬರಿಗೆ ತೊಂದರೆಗೆ ಕಾರಣವಾಗುತ್ತದೆ. ಈಗಲಾದರೂ ಇದನ್ನು ನಿಲ್ಲಿಸುತ್ತಾರೆ ಎಂದು ನಾನು ಭಾವಿಸುವುದಾಗಿಜಾವೇದ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ದೇವಾಲಯಗಳಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿರುವ ಬಗ್ಗೆ ಬಳಕೆದಾರರು ತಮ್ಮ ಅಭಿಪ್ರಾಯವನ್ನು ಕೇಳಿದಾಗ, ಅಖ್ತರ್ ಸ್ಪೀಕರ್‌ಗಳ ದೈನಂದಿನಬಳಕೆಯು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದು ದೇವಾಲಯವಾಗಲಿ ಅಥವಾ ಮಸೀದಿಯಾಗಲಿ, ನೀವು ಹಬ್ಬದ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿದ್ದರೆ ಅದು ಉತ್ತಮವಾಗಿದೆ. ಆದರೆ ಇದನ್ನುದೇವಾಲಯಗಳಲ್ಲಿ ಅಥವಾ ಮಸೀದಿಗಳಲ್ಲಿ ಪ್ರತಿದಿನ ಬಳಸಬಾರದು ಎಂದಿದ್ದಾರೆ.

ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಅಜಾನ್ ಅನ್ನು ಲೌಡ್ ಸ್ಪೀಕರ್ ಇಲ್ಲದೆ ನೀಡಲಾಯಿತು. ಅಜಾನ್ ನಿಮ್ಮ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ, ಇದು ಗ್ಯಾಜೆಟ್ಅಲ್ಲ ಎಂದು ಅವರು ಉತ್ತರಿಸಿದ್ದಾರೆ.

ಮಾರ್ಚ್ ತಿಂಗಳಿಂದ, ದೇಶದಲ್ಲಿ ಕರೋನವೈರಸ್‌‌ನಿಂದಾಗಿಏಕಾಏಕಿ ಮಸೀದಿಗಳನ್ನು ಮುಚ್ಚಲು ಆದೇಶಿಸಲಾಯಿತು. ಈ ಆದೇಶಕ್ಕೂ ಅಖ್ತರ್ ಬೆಂಬಲಿಸಿದ್ದರು, ಸಾಂಕ್ರಾಮಿಕ ರೋಗದಿಂದಾಗಿಕಾಬಾ ಮತ್ತು ಮದೀನಾವನ್ನು ಸಹ ಮುಚ್ಚಲಾಗಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 24 ರಂದು ಪ್ರಾರಂಭವಾದ ಪವಿತ್ರ ರಂಜಾನ್ ತಿಂಗಳಲ್ಲಿ ಮನೆಯಿಂದ ಪ್ರಾರ್ಥನೆ ಸಲ್ಲಿಸುವಂತೆ ಅವರು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.ನಾನು ಈಗ ಎಲ್ಲಾ ಮುಸ್ಲಿಂ ಸಹೋದರರನ್ನು ವಿನಂತಿಸುತ್ತೇನೆ, ದಯವಿಟ್ಟು ರಂಜಾನ್ ತಿಂಗಳಲ್ಲಿ ನಿಮ್ಮ ಪ್ರಾರ್ಥನೆಯಿಂದ ಬೇರೆಯವರಿಗೆ ತೊಂದರೆ ಉಂಟುಮಾಡದಂತೆ ನೋಡಿಕೊಳ್ಳಿ.ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಬದಲು, ಮನೆಯಲ್ಲಿಯೇ ಮಾಡಬಹುದು. ಮನೆ, ನೆಲ, ಇವೆಲ್ಲವನ್ನೂ ಆತನಿಂದಲೇಮಾಡಲ್ಪಟ್ಟಿದೆ. ನಂತರ ನೀವು ಎಲ್ಲಿಯಾದರೂ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಬಹುದು ಎಂದು ಅಖ್ತರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT