ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲೇ ಮೂತ್ರ ಸಂಗ್ರಹಿಸಿದರೆ ಯೂರಿಯಾ ಆಮದು ನಿಲ್ಲಿಸಬಹುದು: ನಿತಿನ್‌ ಗಡ್ಕರಿ

Last Updated 4 ಮಾರ್ಚ್ 2019, 7:02 IST
ಅಕ್ಷರ ಗಾತ್ರ

ನಾಗ್ಪುರ:ಮಾನವನ ಮೂತ್ರ ಜೈವಿಕ ಇಂಧನವನ್ನು ತಯಾರಿಸಲು ಉಪಯುಕ್ತವಾಗಿದೆ ಮತ್ತು ಅದು ಅಮೋನಿಯಮ್‌ ಸಲ್ಫೇಟ್‌ ಹಾಗೂ ಸಾರಜನಕವನ್ನು ಕೂಡಾ ಒದಗಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದ್ದಾರೆ.

ಅನೌಪಚಾರಿಕ ಸಲಹೆ ನೀಡಿರುವ ನಿತಿನ್‌ ಗಡ್ಕರಿ, ಭಾನುವಾರ ಹೊಸದೊಂದು ಯೋಚನೆಯನ್ನು ಹರಿಬಿಟ್ಟಿದ್ದು, ಮೂತ್ರದಿಂದ ಯೂರಿಯಾ ರಸಗೊಬ್ಬರ ಉತ್ಪಾದಿಸಬಹುದು ಎಂದಿದ್ದಾರೆ.

ನಾಗ್ಪುರ ಪುರಸಭೆ ಆಯೋಜಿಸಿದ್ದ ಯುವ ಸಂಶೋಧಕರಿಗೆ ನೀಡುವ 'ಮೇಯರ್‌ ಇನ್ನೋವೇಷನ್‌’ ಪುರಸ್ಕಾರ ಕಾರ್ಯವದಲ್ಲಿ ಮಾತನಾಡಿದ ಅವರು, ಮೂತ್ರ ಸಂಗ್ರಹಿಸುವ ಕಾರ್ಯ ಮಾಡಿದರೆ ಭಾರತವು ರಸಗೊಬ್ಬರವನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ.

ನಾವಿನ್ಯತೆಯ ಪ್ರಾಮುಖ್ಯತೆ ಕುರಿತು ಮಾತನಾಡುವಾಗ ವಿಷಯ ಈ ಪ್ರಸ್ತಾಪಿಸಿ, ಜೈವಿಕ ಇಂಧನಗಳನ್ನು ನೈಸರ್ಗಿಕ ತ್ಯಾಜ್ಯದಿಂದ ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಅವರು ಈ ಉದಾಹರಣೆ ನೀಡಿದ್ದು, ಜೈವಿಕ ಇಂಧನವನ್ನು ತಯಾರಿಸುವಲ್ಲಿ ಮಾನವನ ಮೂತ್ರ ಸಹ ಉಪಯುಕ್ತವಾಗಿದೆ ಮತ್ತು ಅದು ಅಮೋನಿಯಮ್‌ ಸಲ್ಫೇಟ್‌ ಹಾಗೂ ಸಾರಜನಕವನ್ನೂ ಕೂಡಾ ಒದಗಿಸುತ್ತದೆ ಎಂದಿದ್ದಾರೆ.

‘ನಾವು ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ, ನಾವು ಇಡೀ ದೇಶದಲ್ಲಿ ಮೂತ್ರವನ್ನು ಸಂಗ್ರಹಿಸಲು ಆರಂಭಿಸಿದರೆ ಯೂರಿಯಾವನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ಮೂತ್ರ ತುಂಬಾ ಸಾಮರ್ಥ್ಯ ಹೊಂದಿದೆ ಮತ್ತು ಯಾವುದೇ ವ್ಯರ್ಥವಾಗುವುದಿಲ್ಲ. ವಿಮಾನ ನಿಲ್ದಾಣಗಳಲ್ಲಿ ಮೂತ್ರದ ಸಂಗ್ರಹಕ್ಕೆ ನಾನು ಕೇಳಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ನನ್ನ ಅದ್ಭುತವಾದ ಆಲೋಚನೆಗಳಿಗೆ ಇತರ ಜನರು ನನ್ನೊಂದಿಗೆ ಸಹಮತ ತೋರಿಸುತ್ತಿಲ್ಲ. ಅಷ್ಟೇ ಏಕೆ ಈ ಪುರಸಭೆಯೂ ಕೂಡಾ ಸಹಾಯ ಮಾಡುವುದಿಲ್ಲ. ಏಕೆಂದರೆ ಸರ್ಕಾರದಲ್ಲಿ ಜನರನ್ನು ರಾಸುಗಳಂತೆ ತರಬೇತಿಗೊಳಿಸಲಾಗುತ್ತಿದೆ’ ಎಂದೂ ಹೇಳಿಕೊಂಡಿದ್ದಾರೆ.

ತಮ್ಮ ಮೂತ್ರವನ್ನು ಸಂಗ್ರಹಿಸಿ, ದೆಹಲಿಯಲ್ಲಿ ತಮ್ಮ ಅಧಿಕೃತ ಬಂಗಲೆಯೊಂದರ ಉದ್ಯಾನಕ್ಕೆ ರಸಗೊಬ್ಬರವಾಗಿ ಬಳಸುತ್ತಿರುವುದಾಗಿ ಗಡ್ಕರಿ ಅವರು ಕೆಲವು ವರ್ಷಗಳ ಹಿಂದೆ ಹೇಳಿದ್ದರು.

ತ್ಯಾಜ್ಯ ಕೂದಲೂ ರಸಗೊಬ್ಬರಕ್ಕೆ...

ಕಾರ್ಯಕ್ರಮದಲ್ಲಿ ಮತ್ತೊಂದು ಉದಾಹರಣೆ ನೀಡಿದ ಗಡ್ಕರಿ, ಮಾನವನ ತ್ಯಾಜ್ಯ ಕೂದಲಿನಿಂದ ಹೊರ ತೆಗೆಯಲಾದ ಅಮೈನೋ ಆಮ್ಲವನ್ನೂ ರಸಗೊಬ್ಬರ ತಯಾರಿಕೆಗೆ ಬಳಸಬಹುದು ಎಂಬುದನ್ನೂ ವಿವರಿಸಿದ್ದಾರೆ.

ಇದರ ಬಳಕೆಯಿಂತ ತೋಟದಲ್ಲಿ ಶೇಕಡಾ 25ರಷ್ಟು ಉತ್ಪನ್ನ ಹೆಚ್ಚಲಿದೆ ಎಂದಿದ್ದಾರೆ. ತಿರುಪತಿಯಲ್ಲಿ ಭಕ್ತರು ನೀಡುವಟನ್‌ಗಟ್ಟೆ ತಲೆ ಕೂದಲಿನ ಕುರಿತೂ ಈ ವೇಳೆ ಪ್ರಸ್ತಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT