ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಸ್ಲೀಮಾ ನಸ್ರೀನ್‌ ವೀಸಾ ಅವಧಿ ಒಂದು ವರ್ಷ ವಿಸ್ತರಣೆ

Last Updated 21 ಜುಲೈ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್‌ ಅವರ ವೀಸಾವನ್ನು ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಸ್ವೀಡನ್‌ ಪೌರತ್ವ ಪಡೆದಿರುವ ತಸ್ರೀನ್‌ ಅವರಿಗೆ, 2004ರಿಂದಲೂ ಭಾರತದಲ್ಲಿ ಸತತವಾಗಿ ವೀಸಾ ಲಭ್ಯವಾಗಿದೆ.

ಕಳೆದ ವಾರ ತಸ್ಲೀಮಾ ಅವರಿಗೆ ಮೂರು ತಿಂಗಳ ವೀಸಾ ಪರವಾನಗಿಯನ್ನು ನೀಡಲಾಗಿತ್ತು. ನಂತರ ತಸ್ಲೀಮಾ ಅವರು ವೀಸಾ ಅವಧಿಯನ್ನುಒಂದು ವರ್ಷಗಳವರೆಗೆ ವಿಸ್ತರಿಸುವಂತೆ ಕೋರಿದ್ದರು.

‘ಪ್ರತಿ ಬಾರಿ ವೀಸಾ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸುವಂತೆ ಕೋರಿದಾಗ ಒಂದು ವರ್ಷ ವಿಸ್ತರಿಸಲಾಗುತ್ತಿದೆ. ಈ ಬಾರಿ ಕೇವಲ ಮೂರು ತಿಂಗಳವರೆಗೆ ವಿಸ್ತರಣೆಯಾಗಿದೆ. ಗೌರವಾನ್ವಿತ ಗೃಹಸಚಿವರು ನನ್ನ ವೀಸಾ ಅವಧಿಯನ್ನು ಕನಿಷ್ಠ ಒಂದು ವರ್ಷ ವಿಸ್ತರಿಸಲು ಮರುಪರಿಶೀಲಿಸುತ್ತಾರೆ ಎಂದು ಭಾವಿಸುತ್ತೇನೆ’ ಎಂದು ಅವರು ಜುಲೈ 17ರಂದು ಟ್ವೀಟ್‌ ಮಾಡಿದ್ದರು.

1994ರಲ್ಲಿ ಮೂಲಭೂತವಾದಿಗಳಿಂದ ಪ್ರಾಣ ಬೆದರಿಕೆ ಬಂದ ಕಾರಣ ಬಾಂಗ್ಲಾದೇಶ ತೊರೆದರು. ಕಳೆದೆರಡು ದಶಕಗಳಿಂದ ಅವರು ಅಮೆರಿಕ, ಯೂರೋಪ್‌ನಲ್ಲೂ ವಾಸ್ತವ್ಯ ಮಾಡುತ್ತಿದ್ದಾರೆ. ಆದರೂ ಅನೇಕ ಸಂದರ್ಭಗಳಲ್ಲಿ ಅವರು ಭಾರತದಲ್ಲಿ, ಅದರಲ್ಲೂ ಕೋಲ್ಕತ್ತದಲ್ಲಿ ಶಾಶ್ವತವಾಗಿ ನೆಲೆಸುವ ಆಶಯ ವ್ಯಕ್ತಪಡಿಸಿದ್ದಾರೆ.

ತಾನು ಭಾರತದಲ್ಲಿ ವಾಸಿಸಲು ಸಾಧ್ಯವಾಗದಿದ್ದರೆ ನನಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತದೆ. ಅಲ್ಲದೆ, ನನ್ನ ಬರಹ ಹಾಗೂ ಮಹಿಳೆಯರ ಹಕ್ಕುಗಳಿಗಾಗಿನ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುತ್ತದೆ ಎಂದು ತಸ್ಲೀಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT