ಎಸಿಬಿ ದಾಳಿ: ₹ 93.5 ಲಕ್ಷ ವಶ

ಭಾನುವಾರ, ಜೂಲೈ 21, 2019
28 °C

ಎಸಿಬಿ ದಾಳಿ: ₹ 93.5 ಲಕ್ಷ ವಶ

Published:
Updated:
Prajavani

ಹೈದರಾಬಾದ್‌: ದಿಢೀರ್‌ ದಾಳಿ ನಡೆಸಿದ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿಬ್ಬಂದಿ, ತಹಶೀಲ್ದಾರ್‌ರಿಂದ ₹ 93.5 ಲಕ್ಷ ನಗದು ಹಾಗೂ 400 ಗ್ರಾಂ. ಚಿನ್ನ ವಶಪಡಿಸಿಕೊಂಡಿದ್ದಾರೆ.

ರಂಗಾರೆಡ್ಡಿಯ ಜಿಲ್ಲೆಯ ಕೇಶಂಪೇಟ್‌ ತಹಶೀಲ್ದಾರ್‌ ವಿ.ಲಾವಣ್ಯ ಅವರ ಮನೆ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದುವರೆಗೂ ಎಸಿಬಿ ಅಧಿಕಾರಿಗಳು ವಶಪಡಸಿಕೊಂಡ ಹಣದಲ್ಲಿಯೇ ಇದು ಭಾರಿ ಮೊತ್ತವಾಗಿದೆ.

ಬುಧವಾರ ಗ್ರಾಮ ಕಂದಾಯ ಅಧಿಕಾರಿ (ವಿಆರ್‌ಒ) ಅನಂತಯ್ಯ ಎಂಬುವವರು ಲಂಚ ಪಡೆಯುತ್ತಿದ್ದಾಗ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಇಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಹಯಾತ್‌ನಗರದಲ್ಲಿನ ತಹಶೀಲ್ದಾರ್ ಮನೆಯಲ್ಲಿ ಹುಡುಕಾಟ ನಡೆಸಿದಾ‌ಗ ಹಣ ಸಿಕ್ಕಿದೆ. ಆರೋಪಿ ಲಾವಣ್ಯ ಹಣದ ಮೂಲದ ಕುರಿತು ಸ್ಪಷ್ಟ ಮಾಹಿತಿ ನೀಡಲಿಲ್ಲ. ವಿಆರ್‌ಒ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !