ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

Last Updated 18 ಮಾರ್ಚ್ 2020, 2:03 IST
ಅಕ್ಷರ ಗಾತ್ರ

ಹೈದರಾಬಾದ್‌: ಹೈದರಾಬಾದ್ ಬಳಿಯ ಚೆವೆಲ್ಲಾ ಮಂಡಲ್‌ನ ತಂಗದಪಲ್ಲಿ ಗ್ರಾಮದಲ್ಲಿ ಯುವತಿಯೊಬ್ಬಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಈ ಮಹಿಳೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ಶಂಶಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಪ್ರಜಾವಾಣಿಗೆ ಹೇಳಿದ್ದಾರೆ.
ಆಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸುತ್ತುಮುತ್ತಲಿನ ಪ್ರದೇಶಗಳಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ಆಕೆಯ ಗುರುತು ಪತ್ತೆ ಹಚ್ಚಲಾಗುವುದು ಎಂದು ರೆಡ್ಡಿ ಹೇಳಿದ್ದಾರೆ.

ದಿಶಾಪ್ರಕರಣದಂತೆಯೇ ಈ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆಯೇ ಎಂದು ಕೇಳಿದಾಗ, ವೈದ್ಯಕೀಯ ವರದಿ ಸಿಕ್ಕಿದ ನಂತರವೇ ಹೇಳಲಾಗುವುದು ಎಂದಿದ್ದಾರೆ ರೆಡ್ಡಿ.

2019 ನವೆಂಬರ್ 27ರಂದು ವೈದ್ಯೆ ದಿಶಾಳನ್ನು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು. ಮರುದಿನ ಚಟನ್‌ಪಲ್ಲಿಯ ಸೇತುವೆಯೊಂದರ ಕೆಳಗೆ ದಿಶಾಳ ಸುಟ್ಟ ಮೃತದೇಹ ಪತ್ತೆಯಾಗಿತ್ತು. ಚಟನ್‌ಪಲ್ಲಿ ಮತ್ತು ತಂಗದಪಲ್ಲಿ ಸೈಬರಾಬಾದ್ ಪೊಲೀಸರ ಶಂಶಾಬಾದ್ ವಲಯದ ವ್ಯಾಪ್ತಿಯಲ್ಲಿದೆ.
ಈಕೆ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಅನಿಸುತ್ತಿಲ್ಲ. ನಾವು ಈ ಪ್ರಕರಣ ಭೇದಿಸುತ್ತಿದ್ದೇವೆ ಎಂದು ಸೈಬರಾಬಾದ್ ಆಯುಕ್ತ ವಿ.ಸಿ ಸಜ್ಜನರ್ ಹೇಳಿದ್ದಾರೆ.

ಮಹಿಳೆಯ ಮೃತದೇಹ ಪತ್ತೆಯಾಗಿರುವ ಪ್ರಕರಣ ಅಲ್ಲಿನ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT