ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಸೆಪ್ಟೆಂಬರ್‌ನಿಂದ ಆರಂಭ: ಯುಜಿಸಿ

Last Updated 29 ಏಪ್ರಿಲ್ 2020, 16:34 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತವಿರುವ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದೆ. ಲಾಕ್‍ಡೌನ್‌ನಿಂದಾಗಿ 2 ತಿಂಗಳು ತಡವಾಗಿ ಯುನಿವರ್ಸಿಟಿಗಳು ತೆರೆಯಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬುಧವಾರ ಹೇಳಿದೆ.

ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷವು ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ.ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷವು ಆಗಸ್ಟ್ 1 ರಂದು ಆರಂಭವಾಗಲಿದೆ.ವಿಶ್ವವಿದ್ಯಾಲಯಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಯಾವಾಗ ಮತ್ತು ಹೇಗೆ ಆರಂಭ ಮಾಡಬೇಕು ಎಂಬುದನ್ನು ನಿರ್ಧರಿಸಲು ಯುಜಿಸಿ ವಿಶೇಷ ಸಮಿತಿಯೊಂದನ್ನು ರೂಪಿಸಿತ್ತು.ಏಳು ಸದಸ್ಯರಿರುವ ಈ ಸಮಿತಿಯು ಪರೀಕ್ಷಾ ಸಂಬಂಧಿತ ಸಮಸ್ಯೆ ಮತ್ತು ಶೈಕ್ಷಣಿಕ ಕ್ಯಾಲೆಂಡರ್ ಬಗ್ಗೆ ವರದಿ ಸಲ್ಲಿಸಿತ್ತು.

ಎಂಫಿಲ್, ಪಿಎಚ್‌ಡಿ ವಿದ್ಯಾರ್ಥಿಗಳ ಶಿಕ್ಷಣ ಅವಧಿ 6 ತಿಂಗಳು ವಿಸ್ತರಿಸಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಮೌಖಿಕ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.ವಾರದಲ್ಲಿ ಆರು ದಿನ ಎಂಬ ಮಾದರಿಯನ್ನು ವಿವಿಗಳು ಅನುಸರಿಸಬಹುದು.ಲಾಕ್‍ಡೌನ್ ಅವಧಿಯಲ್ಲಿ ಸಿಬ್ಬಂದಿಗಳ, ವಿದ್ಯಾರ್ಥಿಗಳ ಪ್ರಯಾಣ ವಿವರ ಅಥವಾ ಅವರು ವಾಸವಿದ್ದ ಜಾಗದ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕು.

ಪ್ರಸ್ತುತ ಮತ್ತು ಹಿಂದಿನ ಸೆಮಿಸ್ಟರ್‌ನ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಶ್ರೇಣೀಕರಿಸಲಾಗುವುದು. ಕೋವಿಡ್ -19 ಪರಿಸ್ಥಿತಿ ಸಾಮಾನ್ಯಗೊಂಡಿರುವ ರಾಜ್ಯಗಳಲ್ಲಿ, ಜುಲೈ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿದೆ ಎಂದು ಯುಜಿಸಿ ಹೇಳಿದೆ.

ಟರ್ಮಿನಲ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಶ್ವವಿದ್ಯಾಲಯದಲ್ಲಿ ಕೋವಿಡ್ -19 ಸೆಲ್ ರಚಿಸಲಾಗುವುದು. ಇದು ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿದೆ. ಮಾರ್ಗಸೂಚಿಗಳು ಸಲಹೆಯ ರೀತಿಯಲ್ಲಿರಲಿದ್ದು, ಕೋವಿಡ್ -19 ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಯುವಿವರ್ಸಿಟಿಗಳು ಸ್ವಂತ ಯೋಜನೆಯನ್ನು ರೂಪಿಸಬಹುದು ಎಂದು ಯುಜಿಸಿ ಹೇಳಿದೆ.

ವಿಶ್ವವಿದ್ಯಾನಿಲಯಗಳು ಸ್ಕೈಪ್ ಅಥವಾ ಇತರ ಮೀಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಪ್ರಾಯೋಗಿಕ ಪರೀಕ್ಷೆಗಳು ಮತ್ತು ಮೌಖಿಕ ಪರೀಕ್ಷೆಗಳನ್ನು ನಡೆಸಬಹುದು. ಒಂದು ವೇಳೆ ಮಧ್ಯಂತರ ಸೆಮಿಸ್ಟರ್‌ಗಳ ಸಂದರ್ಭದಲ್ಲಿ, ನಂತರದ ಸೆಮಿಸ್ಟರ್‌ಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬಹುದು ಎಂದು ಯುಜಿಸಿ ಸೂಚಿಸಿದೆ.

ವಿಶ್ವವಿದ್ಯಾನಿಲಯಗಳು ಕಡಿಮೆ ಅವಧಿಯಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪರ್ಯಾಯ ಮತ್ತು ಸರಳೀಕೃತ ವಿಧಾನಗಳು ಮತ್ತು ಪರೀಕ್ಷೆಯ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ವಿಶ್ವವಿದ್ಯಾನಿಲಯಗಳು ಸಮಯವನ್ನು 3 ಗಂಟೆಗಳಿಂದ 2 ಗಂಟೆಗಳವರೆಗೆ ಕಡಿಮೆ ಮಾಡುವ ಮೂಲಕ ದಕ್ಷ ಮತ್ತು ನೂತನ ಪರೀಕ್ಷೆಯ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂದು ಯುಜಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT