ಶುಕ್ರವಾರ, ಏಪ್ರಿಲ್ 10, 2020
19 °C

ಪೈಲಟ್‌ ವೇಶದಲ್ಲಿದ್ದ ಟಿಕ್‌ಟಾಕ್ ಕಲಾವಿದನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಫ್ತಾನ್ಸಾ ವಿಮಾನ ಸಂಸ್ಥೆಯ ಪೈಲಟ್‌ ಸಮವಸ್ತ್ರ ಧರಿಸಿದ್ದ ಟಿಕ್‌ಟಾಕ್‌ ಕಲಾವಿದನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.

ಬಂಧಿತ ಟಿಕ್‌ಟಾಕ್‌ ಕಲಾವಿದನನ್ನು ರಾಜನ್ ಮಹಬುಬಾನಿ (48) ಎಂದು ಗುರುತಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಮತ್ತು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ನಕಲಿ ಐಡಿ ಕಾರ್ಡ್‌ನ್ನು ಬಳಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.  

ಪೈಲಟ್‌ ಸಮವಸ್ತ್ರದಲ್ಲಿದ್ದ ಮಹಬುಬಾನಿ ಬಗ್ಗೆ ಅನುಮಾನಗೊಂಡ  ಜರ್ಮನ್ ಏರ್‌ಲೈಸ್ಸ್‌ ಸಂಸ್ಥೆಯ  ಮುಖ್ಯ ಭದ್ರತಾಧಿಕಾರಿ  ಸಿಐಎಸ್‌ಗೆ ಮಾಹಿತಿ ನೀಡಿದ್ದಾರೆ. ಮಹಬುಬಾನಿ ಬಂಧಿಸಿದ ಅಧಿಕಾರಿಗಳು ನಕಲಿ ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಂಡ ಬಳಿಕ ಮಹಬುಬಾನಿಯನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.  

ವಿಮಾನಯಾನಕ್ಕೆ ಸಂಬಂಧಿಸಿದಂತೆ ಟಿಕ್‌ಟಾಕ್‌ ಹಾಗೂ ಯುಟ್ಯೂಬ್‌ ವಿಡಿಯೊಗಳನ್ನು ತಯಾರಿಸುತ್ತಿದ್ದ.  ಲುಫ್ತಾನ್ಸಾ ವಿಮಾನಯಾನ  ಸಂಸ್ಥೆಯ ನಕಲಿ ಐಡಿ ಕಾರ್ಡ್‌ ಅನ್ನು ಕಾಕ್‌ನಿಂದ ಪಡೆದಿರುವುದಾಗಿ ಆರೋಪಿ ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ವಿವಿಧ ವೃತ್ತಿಗಳ ಸಮವಸ್ತ್ರಗಳನ್ನು ಧರಿಸಿ ಫೋಟೊ ತೆಗೆದುಕೊಂಡಿರುದಾಗಿ ತನಿಖೆಯ ವೇಳೆ ಮಹಬುಬಾನಿಯು ಹೇಳಿದ್ದಾನೆ. 

ಮಹಬುಬಾನಿ ಫೋನ್‌ನಲ್ಲಿ ಆರ್ಮಿ ಕರ್ನಲ್‌ನ ಸಮವಸ್ತ್ರದಲ್ಲಿರುವ  ಚಿತ್ರಗಳು ಇದ್ದವು. ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು