ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಿಲ್‌ನಲ್ಲಿ ಸಿಲುಕಿ ಗಾಯಗೊಂಡ ಎರಡು ಜಿಂಕೆಗಳು

Last Updated 9 ಜೂನ್ 2020, 7:04 IST
ಅಕ್ಷರ ಗಾತ್ರ

ಥಾಣೆ: ಇಲ್ಲಿನ ಘೋಡಬಂದರ್‌ ರಸ್ತೆಯಲ್ಲಿರುವ ವಸತಿ ಸಂಕೀರ್ಣದ ಗ್ರಿಲ್‌ಗಳ ನಡುವೆ ಸಿಲುಕಿ ಎರಡು ಜಿಂಕೆಗಳು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ಈ ಎರಡೂ ಜಿಂಕೆಗಳನ್ನು ರಕ್ಷಿಸಿರುವ ಅರಣ್ಯಾಧಿಕಾರಿಗಳು ಅವುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೊದಲಿಗೆ ಮಧ್ಯರಾತ್ರಿ 12.30 ಗಂಟೆಗೆ ಒಂದು ಜಿಂಕೆ ಗ್ರಿಲ್‌ಗಳ ನಡುವೆ ಸಿಲುಕಿ ಗಾಯಗೊಂಡಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಅರಣ್ಯ ಇಲಾಖೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ (ಆರ್‌ಡಿಎಂಸಿ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಿಂಕೆಯನ್ನು ಸುರಕ್ಷಿತವಾಗಿ ಗ್ರಿಲ್‌ನಿಂದ ಬಿಡಿಸಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ ಎಂದು ಆರ್‌ಡಿಎಂಸಿ ಮುಖ್ಯಸ್ಥ ಸಂತೋಷ್‌ ಕಡಮ್‌ ತಿಳಿಸಿದ್ದಾರೆ.

ಬೆಳಿಗ್ಗೆ 6 ಗಂಟೆ ಸುಮಾರಿಗೆ ಮತ್ತೊಂದು ಜಿಂಕೆಯು ಇದೇ ವಸತಿ ಸಂಕೀರ್ಣದ ಗ್ರಿಲ್‌ಗಳ ನಡುವೆ ಸಿಲುಕಿ ಗಾಯಗೊಂಡಿದೆ. ಅದನ್ನೂ ರಕ್ಷಿಸಲಾಯಿತು. ಎರಡೂ ಜಿಂಕೆಗಳನ್ನು ನೆರೆಯ ಮುಂಬೈನ ಬೋರಿವಿಲಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ಪಶುವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅರಣ್ಯ ಅಧಿಕಾರಿ ರಾಜೇಂದ್ರ ಪವಾರ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಜಿಂಕೆಗಳು ಹಿಂಡುಗಳಲ್ಲಿ ಚಲಿಸುತ್ತವೆ, ಈ ಎರಡೂ ಜಿಂಕೆಗಳು ಬಹುಷಃ ಕಾಡಿನಲ್ಲಿ ತಮ್ಮ ಗುಂಪಿನಿಂದ ಬೇರ್ಪಟ್ಟಿರಬಹುದು. ನಂತರ ಅವು ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದಿರಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT