ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಟ್ರೊ’ ಎರಡನೇ ಹಂತಕ್ಕೆ ₹1,012 ಕೋಟಿ ಅನುದಾನ

Last Updated 2 ಜುಲೈ 2019, 9:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ನಮ್ಮ ಮೆಟ್ರೊ ಯೋಜನೆಯ 2ನೇ ಹಂತಕ್ಕೆ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯವು 2019–20ನೇ ಸಾಲಿನ ಬಜೆಟ್‌ನಲ್ಲಿ ₹ 1,012 ಕೋಟಿ ಒದಗಿಸಲು ನಿರ್ಧರಿಸಿದೆ.

2017–18ರಲ್ಲಿ ಮೆಟ್ರೊ ಯೋಜನೆಗಾಗಿ ₹ 150. 94 ಕೋಟಿ ಮೀಸಲಿರಿಸಿದ್ದ ಸರ್ಕಾರ, ಕಳೆದ ವರ್ಷ ಅಂದಾಜಿಸಲಾಗಿದ್ದ ₹ 300 ಕೋಟಿ ಪೈಕಿ ₹ 168 ಕೋಟಿ ವ್ಯಯಿಸಿದೆ.

ಮುಂದಿನ ಹಣಕಾಸು ವರ್ಷಕ್ಕೆ ₹1,012 ಕೋಟಿ ಅಂದಾಜು ಅನುದಾನವನ್ನು ಬಜೆಟ್‌ನಲ್ಲಿ ಕಾದಿರಿಸುವ ಮೂಲಕ ಉದ್ಯಾನ ನಗರಿಯ ಸಂಚಾರ ದಟ್ಟಣೆ ಕಡಿತಗೊಳಿಸಲು ಮತ್ತಷ್ಟು ಹೊಸ ಮಾರ್ಗಗಳ ನಿರ್ಮಾಣದ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ಸಂಯೋಜಿತ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆ–1ಕ್ಕೆ ₹217 ಕೋಟಿ, ರಾಜ್ಯ ಹೆದ್ದಾರಿ ಸುಧಾರಣೆಯ ಯೋಜನೆ–2ಕ್ಕೆ ₹ 300 ಕೋಟಿ, ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ–2ಕ್ಕೆ ₹131 ಕೋಟಿ ಅಂದಾಜು ಅನುದಾನ ಒದಗಿಸಲು ಶುಕ್ರವಾರ ಸಚಿವ ಪೀಯೂಷ್‌ ಗೋಯಲ್‌ ಮಂಡಿಸಿರುವ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ರಾಜ್ಯದ ವಿವಿಧ ಸಂಸ್ಥೆಗಳಿಗೆ ವಾರ್ಷಿಕ ಅನುದಾನ ಹಂಚಿಕೆಯಲ್ಲಿ ಹೆಚ್ಚಳ ಮಾಡಲಾಗಿದೆ. ಕೆಳಕಂಡ ಸಂಸ್ಥೆಗಳಿಗೆ 2019–20ನೇ ಸಾಲಿಗೆ ಹೆಚ್ಚುವರಿ ಅನುದಾನ ಮೀಸಲಿರಿಸಲು ನಿರ್ಧರಿಸಲಾಗಿದೆ.

ಯಾವುದಕ್ಕೆ ಎಷ್ಟು ಅನುದಾನ?

* ಬೆಂಗಳೂರಿನ ರಾಷ್ಟ್ರೀಯ ಯೂನಾನಿ ಔಷಧಿ ಸಂಸ್ಥೆಗೆ ₹ 40 ಕೋಟಿ
* ಸೆಂಟರ್‌ ಫಾರ್‌ ನ್ಯಾನೋ ಅಂಡ್‌ ಸಾಫ್ಟ್‌ ಮ್ಯಾಟರ್‌ ಸೈನ್ಸ್‌ಗೆ ₹ 10.40 ಕೋಟಿ
* ಭಾರತೀಯ ವಿಜ್ಞಾನ ಅಕಾಡೆಮಿಗೆ ₹ 13.01 ಕೋಟಿ
* ಭಾರತೀಯ ಆ್ಯಸ್ಟ್ರೋ ಫಿಸಿಕ್ಸ್‌ ಸಂಸ್ಥೆಗೆ ₹ 61.11 ಕೋಟಿ
* ಜವಾಹರಲಾಲ್‌ ನೆಹರೂ ಅಡ್ವಾನ್ಸ್ಡ್‌ ಸೈಂಟಿಫಿಕ್‌ ಸಂಶೋಧನಾ ಕೇಂದ್ರಕ್ಕೆ 89.89 ಕೋಟಿ
* ರಾಮನ್‌ ಸಂಶೋಧನಾ ಸಂಸ್ಥೆಗೆ ₹54.09 ಕೋಟಿ
* ನಿಮ್ಹಾನ್ಸ್ ಸಂಸ್ಥೆಗೆ ₹ 450 ಕೋಟಿ
* ಭಾರತೀಯ ವಿಜ್ಞಾನ ಸಂಸ್ಥೆಗೆ ₹ 179 ಕೋಟಿ
* ಮೈಸೂರಿನ ಸ್ಪೀಚ್‌ ಅಂಡ್‌ ಹಿಯರಿಂಗ್‌ ಸಂಸ್ಥೆಗೆ ₹ 55 ಕೋಟಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT