ಊರ್ಜಿತ್ ಪಟೇಲ್ ರಾಜೀನಾಮೆ ಮೂಲಕ ಪ್ರತಿಭಟಿಸಿದ್ದಾರೆ: ರಘುರಾಂ ರಾಜನ್ 

7

ಊರ್ಜಿತ್ ಪಟೇಲ್ ರಾಜೀನಾಮೆ ಮೂಲಕ ಪ್ರತಿಭಟಿಸಿದ್ದಾರೆ: ರಘುರಾಂ ರಾಜನ್ 

Published:
Updated:

ನವದೆಹಲಿ: ರಾಜೀನಾಮೆ ನೀಡುವ ಮೂಲಕ ಊರ್ಜಿತ್ ಪಟೇಲ್ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.

ಊರ್ಜಿತ್ ಪಟೇಲ್ ಅವರ ಹೇಳಿಕೆಯನ್ನು ನಾವು ಗೌರವಿಸಬೇಕು. ಅವರು ರಾಜೀನಾಮೆ ನೀಡಲು ಕಾರಣವಾದ ಸಂಗತಿ ಏನೆಂಬುದನ್ನು ತಿಳಿಯಬೇಕು ಎಂದು ಇಕನಾಮಿಕ್ಸ್ ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಜನ್ ಹೇಳಿದ್ದಾರೆ. 

ಎಲ್ಲ ಭಾರತೀಯರು ಈ ಬಗ್ಗೆ ಯೋಚಿಸಬೇಕಾಗಿದೆ. ಯಾಕೆಂದರೆ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗಾಗಿ ನಮ್ಮ ಸಂಸ್ಥೆಯನ್ನು ಸುದೃಢಗೊಳಿಸುವುದು ಮುಖ್ಯ. ಕೇಂದ್ರ ಸರ್ಕಾರ ಆರ್‌ಬಿಐ ಜತೆಗಿನ ಸಂಬಂಧವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕು ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ
 

ಬರಹ ಇಷ್ಟವಾಯಿತೆ?

 • 46

  Happy
 • 2

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !