ರಾಜಕೀಯಕ್ಕೆ ಸಶಸ್ತ್ರಪಡೆಗಳ ಬಳಕೆ ಸಲ್ಲದು: ರಾಷ್ಟ್ರಪತಿಗೆ ನಿವೃತ್ತ ಸೈನಿಕರ ಪತ್ರ

ಶುಕ್ರವಾರ, ಏಪ್ರಿಲ್ 19, 2019
22 °C

ರಾಜಕೀಯಕ್ಕೆ ಸಶಸ್ತ್ರಪಡೆಗಳ ಬಳಕೆ ಸಲ್ಲದು: ರಾಷ್ಟ್ರಪತಿಗೆ ನಿವೃತ್ತ ಸೈನಿಕರ ಪತ್ರ

Published:
Updated:

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದ ಗುರುವಾರದಂದೇ ವಿವಿಧ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 156 ಯೋಧರು ದೇಶದ ಎಲ್ಲ ಸಶಸ್ತ್ರ ಪಡೆಗಳ ಮಹಾ ದಂಡನಾಯಕರೂ ಆಗಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದು, ‘ರಾಜಕೀಯ ಉದ್ದೇಶಗಳಿಗೆ’ ಸಶಸ್ತ್ರಪಡೆಗಳನ್ನು ಎಳೆದು ತರುವುದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರಕ್ಕೆ ಸಹಿ ಹಾಕಿರುವವರಲ್ಲಿ ಜನರಲ್‌ಗಳಾಗಿ ನಿವೃತ್ತರಾದ ಮೂವರು, ನೌಕಾಪಡೆಯ ಮುಖ್ಯಸ್ಥರಾಗಿ ನಿವೃತ್ತರಾದ ನಾಲ್ವರು ಮತ್ತು ವಾಯುಪಡೆಯ ಮುಖ್ಯಸ್ಥರಾದ ನಿವೃತ್ತರಾದ ಎನ್‌.ಸಿ.ಸೂರಿ ಸೇರಿದ್ದಾರೆ ಎನ್ನುವುದು ಉಲ್ಲೇಖಾರ್ಹ ಅಂಶ.


ನಿವೃತ್ತ ಸೈನಿಕರು ರಾಷ್ಟ್ರಪತಿಗೆ ಬರೆದಿರುವ ಪತ್ರ

‘ಭಾರತೀಯ ಸಶಸ್ತ್ರಪಡೆಗಳ ಮಹಾದಂಡನಾಯಕರಾದ ತಮ್ಮ ಅವಗಾಹನೆಗೆ ಕೆಲವು ಮುಖ್ಯ ವಿಷಯಗಳನ್ನು ತರಬೇಕಾಗಿದೆ. ಸೇವಾ ನಿರತ ಮತ್ತು ನಿವೃತ್ತ ಯೋಧರಲ್ಲಿ ಈಚೆಗಿನ ಕೆಲ ಬೆಳವಣಿಗೆಗಳು ಅಸಮಾಧಾನ ತಂದಿವೆ. ಗಡಿದಾಟಿ ಶತ್ರುವಿನ ನೆಲೆ ಧ್ವಂಸ ಮಾಡುವ ಸೇನಾಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಪಕ್ಷಗಳ ನಾಯಕರು ಸ್ವಂತ ಸಾಧನೆ ಎಂದು ಬಿಂಬಿಸಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಪತ್ರ ಹೇಳಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತೀಯ ಸೇನೆಯನ್ನು ‘ಮೋದಿಜಿ ಕಿ ಸೇನಾ’ ಎಂದು ಹೇಳಿದ್ದ ಸಂಗತಿಯನ್ನು ನಿವೃತ್ತ ಯೋಧರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರ ಭಾವಚಿತ್ರಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿರುವುದಕ್ಕೂ ನಿವೃತ್ತ ಯೋಧರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 29

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !