ಮುಂಬೈ:ಒಂದು ವೇಳೆ ರಾಜ್ಯಪಾಲರು ಆಹ್ವಾನ ನೀಡಿದ್ದೇ ಆದರೆ ಈಗಲೇನಮ್ಮ ಪಕ್ಷ ಬಹುಮತ ಸಾಬೀತಿಗೆಸಿದ್ಧವಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಂದ್ರ ಫಡಣವೀಸ್ ಅವರು ಪ್ರಮಾಣ ವಚನ ಸ್ವೀಕರಿಸಿರುವುದು ಆಕಸ್ಮಿಕ ಮತ್ತು ನಿನ್ನೆ(ಶನಿವಾರ) ಪ್ರಜಾಪ್ರಭುತ್ವದ ಕರಾಳ ದಿನ ಎಂದು ಕಿಡಿಕಾರಿದ್ದಾರೆ.

ದೇಶ ಮತ್ತು ಮಹಾರಾಷ್ಟ್ರದ ಇತಿಹಾಸದಲ್ಲಿಯೇ ನವೆಂಬರ್ 23 ಪ್ರಜಾಪ್ರಭುತ್ವಕ್ಕೆ ಕರಾಳ ದಿನವಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೂಕೂಡ ಮಹಾರಾಷ್ಟ್ರದ ಜನರಿಗೆ ಮಾತ್ರ ಅದು ತಿಳಿದಿರಲಿಲ್ಲ. ದೇಶದಲ್ಲಿ ಈ ರೀತಿ ಆಗಿರುವುದು ಇದೇ ಮೊದಲು. ರಾಜಭವನ ಮತ್ತು ರಾಷ್ಟ್ರಪತಿ ಭವನಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ದೇಶದ ಇತಿಹಾಸದಲ್ಲಿ ಎಂದಿಗೂ ನಡೆದಿಲ್ಲ ಎಂದು ದೂರಿದರು.

ಅಜಿತ್ ಪವಾರ್ ಅವರು ರಾಜಭವನಕ್ಕೆ ಸುಳ್ಳು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಮತ್ತು ರಾಜ್ಯಪಾಲರು ಅವುಗಳನ್ನು ಸ್ವೀಕರಿಸಿದ್ದಾರೆ. ರಾಜ್ಯಪಾಲರು ಇಂದು ಕೇಳಿದರೂ ಕೂಡ ನಾವು ಬಹುಮತ ಸಾಬೀತು ಮಾಡುತ್ತೇವೆ. ಎನ್‌ಸಿಪಿಯ 49 ಶಾಸಕರು ನಮ್ಮ ಜತೆಗಿದ್ದಾರೆ. ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಎನ್‌ಸಿಪಿ ನಾಯಕರಜೀವನದ ದೊಡ್ಡ ತಪ್ಪಾಗಿದೆ ಎಂದರು.

ಶರದ್ ಪವಾರ್ ಅವರು ರಾಷ್ಟ್ರೀಯ ನಾಯಕ. ಆದರೆ ಬಿಜೆಪಿ ಮತ್ತು ಅಜಿತ್ ಪವಾರ್ ಅವರು ತಪ್ಪು ಹೆಜ್ಜೆಯನ್ನಿಟ್ಟಿದ್ದಾರೆ. ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿಯ 165 ಜನ ಶಾಸಕರು ಇದ್ದಾರೆ. ಈ ವಯಸ್ಸಿನಲ್ಲಿ ಪವಾರ್ ಸಾಹೇಬರಿಗೆ ದ್ರೋಹ ಬಗೆಯುವ ಮೂಲಕ ಅಜಿತ್ ಪವಾರ್ ತಮ್ಮ ಜೀವನದ ದೊಡ್ಡ ತಪ್ಪನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.