ಶನಿವಾರ, ಜುಲೈ 24, 2021
26 °C

ಶಸ್ತ್ರಾಸ್ತ್ರಗಳನ್ನು ಜೋಡಿಸಿ ಭಾರತಕ್ಕೆ ಕಳುಹಿಸಲಾಗಿದ್ದ ಪಾಕ್‌ ಡ್ರೋನ್‌‌‌ ಧ್ವಂಸ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಕತುವಾ(ಜಮ್ಮುಕಾಶ್ಮೀರ): ಶಸ್ತ್ರಾಸ್ತ್ರಗಳನ್ನು ಜೋಡಿಸಿ ಭಾರತಕ್ಕೆ ಕಳುಹಿಸಲಾಗಿದ್ದ ಪಾಕಿಸ್ತಾನದ ಡ್ರೋನ್‌‌ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಶನಿವಾರ ಹೊಡೆದುರುಳಿಸಿದೆ. 

ಜಮ್ಮು ಕಾಶ್ಮೀರದ, ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕತುವಾ ಜಿಲ್ಲೆಯ ಪನ್ಸಾರ್‌ ಎಂಬಲ್ಲಿ ಹಾರಿ ಬರುತ್ತಿದ್ದ ಡ್ರೋನ್‌ ಅನ್ನು ಮುಂಜಾನೆ 5.10ರ ಸುಮಾರಿನಲ್ಲಿ ಗಸ್ತಿನಲ್ಲಿದ್ದ ಬಿಎಸ್‌ಫ್‌ ಯೋಧರು ಧ್ವಂಸಗೊಳಿಸಿದ್ದಾರೆ.  

ಬಿಎಸ್‌ಎಫ್‌ ಸಿಬ್ಬಂದಿ ಡ್ರೋನ್‌‌ ಕಡೆಗೆ 9 ಸುತ್ತಿನ ಗುಂಡು ಹಾರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಡ್ರೋನ್‌‌ ಅನ್ನು ಪರಿಶೀಲಿಸಲಾಗಿದ್ದು, ಅದಕ್ಕೆ ಶಸ್ತ್ರಾಸ್ತ್ರಗಳನ್ನು ಜೋಡಿಸಿ ರವಾನಿಸಿರುವುದು ಖಚಿತವಾಗಿದೆ. ಅದರಲ್ಲಿ ಬಂದೂಕುಗಳು ಪತ್ತೆಯಾಗಿವೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.  

ಡ್ರೋನ್‌‌ ಕುರಿತು ತನಿಖೆ ನಡೆಯುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು