ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಫೇಲ್‌ ತೀರ್ಪು ಮರುಪರಿಶೀಲನೆ ಅರ್ಜಿ’ ಶೀಘ್ರ ವಿಚಾರಣೆ ಮನವಿಗೆ ಸುಪ್ರೀಂ ಸಮ್ಮತಿ

Last Updated 21 ಫೆಬ್ರುವರಿ 2019, 7:04 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಸಂಬಂಧ ಕೇಂದ್ರದ ವಿರುದ್ಧ ಸಲ್ಲಿಕೆಯಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿತ್ತು. ಆ ತೀರ್ಪು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಶೀಘ್ರ ವಿಚಾರಣೆ ನಡೆಸುವಂತೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪರಿಗಣಿಸಿದೆ.

’ಈ ಸಂಬಂಧ ಎಲ್ಲ ಅರ್ಜಿಗಳ ವಿಚಾರಣೆ ನಡೆಸಲು ವಿವಿಧ ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ರಚಿಸುವ ಅವಶ್ಯಕತೆಯಿದೆ. ಈ ಕುರಿತು ಪರಿಶೀಲಿಸಬೇಕಿದೆ...’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಹೇಳಿದ್ದಾರೆ.

ರಫೇಲ್‌ ಒಪ್ಪಂದದ ಸಂಬಂಧ ಸಿಎಜಿ ವರದಿ ಬಗ್ಗೆ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿದ್ದು, ಅದರ ತಿದ್ದುಪಡಿಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಮನವಿ ಸೇರಿ ಒಟ್ಟು ನಾಲ್ಕು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.

ಸಿಎಜಿ ಸಂಸತ್ತಿಗೆ ಅದಾಗಲೇ ವರದಿ ಸಲ್ಲಿಸಿದೆ ಎನ್ನುವ ಮೂಲಕ ಕೋರ್ಟ್‌ ದಾರಿ ತಪ್ಪಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ವಕೀಲ‍ಪ್ರಶಾಂತ್‌ ಭೂಷಣ್‌ ಮನವಿ ಮಾಡಿದ್ದಾರೆ. ರಫೇಲ್‌ ಒಪ್ಪಂದ ಸಂಬಂಧ ಸಿಎಜಿ ಫೆ.13ರಂದು ಸಂಸತ್ತಿಗೆ ವರದಿ ಸಲ್ಲಿಸಿತ್ತು. 36 ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಸಂಬಂಧ ಕೋರ್ಟ್ ನೀಡಿರುವ ತೀರ್ಪು ಮರುಪರಿಶೀಲಿಸುವಂತೆ ಪ್ರಶಾಂತ್‌ ಭೂಷಣ್‌ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದ(ಎಎಪಿ) ಮುಖಂಡ ಸಂಜಯ್‌ ಸಿಂಗ್‌ ಸಹ ತೀರ್ಪು ಮರುಪರಿಶೀನಗೆ ಮನವಿ ಮಾಡಿದ್ದಾರೆ.

ರಫೇಲ್‌ ಪ್ರಕರಣದಲ್ಲಿ ಕೇಂದ್ರದ ಒಪ್ಪಂದದ ನಿರ್ಧಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅನುಮಾನ ಪಡುವ ಯಾವುದೇ ಕಾರಣ ತೋರುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಡಿಸೆಂಬರ್‌ನಲ್ಲಿ ಹೇಳಿತ್ತು. 2016ರ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿದೇಶಿ ಪಾಲುದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಸರ್ಕಾರ ಪಕ್ಷಪಾತ ಮಾಡಿದೆ. ಅನಿಲ್‌ ಅಂಬಾನಿ ಸಂಸ್ಥೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಿದೆ, ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT