ವಿಂಗ್ ಕಮಾಂಡರ್ ಅಭಿನಂದನ್ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸುದ್ದಿ ನಿಜವೇ?

ಶನಿವಾರ, ಏಪ್ರಿಲ್ 20, 2019
24 °C
ಬಿಜೆಪಿ ಬೆಂಬಲಿತ ಫೇಸ್‌ಬುಕ್‌ ಪುಟಗಳಲ್ಲಿ ವೈರಲ್ ಆಗಿದೆ ಪೋಸ್ಟ್‌

ವಿಂಗ್ ಕಮಾಂಡರ್ ಅಭಿನಂದನ್ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸುದ್ದಿ ನಿಜವೇ?

Published:
Updated:

ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಜತೆಗೆ ಬಿಜೆಪಿ ಚಿಹ್ನೆಯಿರುವ ಕೇಸರಿ ಶಾಲು ಹಾಕಿರುವ, ಅಭಿನಂದನ್‌ರನ್ನೇ ಹೋಲುವ ವ್ಯಕ್ತಿಯೊಬ್ಬರ ಫೋಟೊವನ್ನೂ ಪ್ರಕಟಿಸಲಾಗಿದೆ.

‘ವಿಂಗ್ ಕಮಾಂಡರ್ ಅಭಿನಂದನ್‌ಜಿ ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸಿದ್ದು ಮೋದಿಜಿ ಅವರನ್ನು ಪ್ರಧಾನಿ ಮಾಡಲು ಮತ ಚಲಾಯಿಸಿದ್ದಾರೆ. ಸದ್ಯ ಮೋದಿ ಅವರಿಗಿಂತ ಉತ್ತಮ ಪ್ರಧಾನಿ ಬೇರೊಬ್ಬರಿಲ್ಲ ಎಂದೂ ಹೇಳಿದ್ದಾರೆ. ಸ್ನೇಹಿತರೇ, ಇದು ಕಾಂಗ್ರೆಸ್‌ನವರಿಗೆ ಮತ್ತು ಜಿಹಾದಿಗಳಿಗೆ ತಲುಪುವಂತೆ ನೋಡಿಕೊಳ್ಳಿ. ನೀವು (ಕಾಂಗ್ರೆಸ್‌ನವರನ್ನು ಉದ್ದೇಶಿಸಿ) ಯೋಧನನ್ನು ಜೀವಂತ ವಾಪಸ್ ಕರೆಸಿಕೊಳ್ಳಲಿಲ್ಲ ಹಾಗೂ ಇಂದು ಅಭಿನಂದನ್ ವಾಪಸಾಗಿದ್ದು ಬಿಜೆಪಿಗೆ ಮತವನ್ನೂ ಹಾಕಿದ್ದಾರೆ’ ಎಂದು ‘ನಮೋ ಬೆಸ್ಟ್‌ ಪಿಎಂ ಆಫ್ ಇಂಡಿಯಾ’ ಎಂಬ ಫೇಸ್‌ಬುಕ್‌ಪುಟದಲ್ಲಿ ಬರೆಯಲಾಗಿದೆ.

ಬಿಜೆಪಿ ಬೆಂಬಲಿತ ಅನೇಕ ಫೇಸ್‌ಬುಕ್‌ ಪುಟಗಳಲ್ಲಿ ಮತ್ತು ಗ್ರೂಪ್‌ಗಳಲ್ಲಿ ಈ ಸಂದೇಶ ಹರಿದಾಡುತ್ತಿದೆ. ಟ್ವಿಟರ್‌ನಲ್ಲೂ ಶೇರ್ ಆಗಿದೆ.

ನಿಜವೇನು?

ಇದು ಅಭಿನಂದನ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರ ಚಿತ್ರವನ್ನು ಬಳಸಿಕೊಂಡು ಹರಡಲಾಗಿರುವ ಸುಳ್ಳು ಸುದ್ದಿ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.


ಚಿತ್ರ ಕೃಪೆ: ಆಲ್ಟ್‌ನ್ಯೂಸ್

ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಚಿತ್ರದಲ್ಲಿರುವ ವ್ಯಕ್ತಿ ದೊಡ್ಡದಾದ ಕನ್ನಡಕ ಧರಿಸಿರುವುದರಿಂದ ಮುಖದ ಭಾಗ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಆ ವ್ಯಕ್ತಿಯ ಬಲಗಣ್ಣಿನ ಬದಿಯಲ್ಲಿ ಮಚ್ಚೆ ಇದೆ. ಆದರೆ ಅಭಿನಂದನ್ ಬಲಗಣ್ಣಿನ ಬದಿಯಲ್ಲಿ ಮಚ್ಚೆ ಇಲ್ಲ. ಅಭಿನಂದನ್ ತುಟಿಯ ಕೆಳಭಾಗದಲ್ಲಿ ಮಚ್ಚೆ ಇದೆ. ಆದರೆ ಫೋಟೊದಲ್ಲಿರುವ ವ್ಯಕ್ತಿಯ ತುಟಿಯ ಕೆಳಭಾಗದಲ್ಲಿ ಮಚ್ಚೆ ಇಲ್ಲ. ಅಭಿನಂದನ್ ಮತ್ತು ಫೋಟೊದಲ್ಲಿರುವ ವ್ಯಕ್ತಿಯ ಗಡ್ಡ, ಕತ್ತಿನ ಭಾಗದಲ್ಲಿಯೂ ವ್ಯತ್ಯಾಸಗಳನ್ನು ಕಾಣಬಹುದು ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌? ವಿಡಿಯೊ ಬಿಡುಗಡೆ 

ಇನ್ನೊಂದು ಮುಖ್ಯ ಅಂಶವೆಂದರೆ, ಅಭಿನಂದನ್ ಅವರು ತಮಿಳುನಾಡಿನವರು. ಅವರಿಗೆ ತಮಿಳುನಾಡಿನಲ್ಲಿ ಮತದಾನದ ಹಕ್ಕಿರುವ ಸಾಧ್ಯತೆಯೇ ಹೆಚ್ಚು. ಆದರೆ, ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮಿಳುನಾಡಿನಲ್ಲಿ ಮತದಾನ ಇರಲಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: ತಾಯ್ನೆಲದಲ್ಲಿ ವಿಂಗ್ ಕಮಾಂಡರ್ ಅಭಿನಂದನ್: ಭಾವುಕ ಕ್ಷಣ, ಎಲ್ಲೆಲ್ಲೂ ಸಂಭ್ರಮ​

ನಿಯಮಗಳ ಪ್ರಕಾರ, ಭಾರತೀಯ ವಾಯುಪಡೆಯ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಅಭಿನಂದನ್ ಅವರು ಬಿಜೆಪಿ ಪರ ಪ್ರಚಾರ ಮಾಡುವಂತೆಯೂ ಇಲ್ಲ.

ಇನ್ನಷ್ಟು...

ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ... 

ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್‌ಬುಕ್‌ನಲ್ಲಿ ಈ 10 ನಿಯಮಗಳನ್ನು ಪಾಲಿಸಿ

ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನಂದನ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ

ವಿಮಾನದಲ್ಲಿ ಅಭಿನಂದನ್‍ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು

* ಪಾಕ್‌ ಪ್ರಯಾಣಿಕರಿಗೆ ಆಹಾರ ವಿತರಿಸಿದ ಭಾರತದ ಪೊಲೀಸರು

ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್

ವಿಂಗ್ ಕಮಾಂಡರ್ ಅಭಿನಂದನ್‌ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ

ಅಭಿನಂದನ್‌ ಕರೆತನ್ನಿ: ಕಾಳಜಿಯ ಕರೆ 

ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ

ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದ ಪಾಕ್‌ ಪ್ರಧಾನಿಯ ಪಕ್ಷ​

ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ​

ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ​

ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ

ಬರಹ ಇಷ್ಟವಾಯಿತೆ?

 • 22

  Happy
 • 4

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !