ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸೋಂಕಿತರ ನಿಗಾಕ್ಕೆ ಮೊಬೈಲ್‌ ಆ್ಯಪ್‌

Last Updated 17 ಏಪ್ರಿಲ್ 2020, 16:00 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾಡಳಿತದರಿಂದ ‘ಕೋವಿಡ್‌ ಪೇಸೆಂಟ್‌ ಮಾನಿಟರಿಂಗ್‌ ಆ್ಯಪ್‌’ವೊಂದನ್ನು ರಾಜ್ಯದಲ್ಲೇ ಮೊದಲು ಬಾರಿಗೆ ಶೋಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹೇಳಿದರು.

ಈ ಆ್ಯಪ್‌ ಸಹಾಯದಿಂದ ಕೋವಿಡ್‌–19 ರೋಗಿಗಳ ಮೇಲೆ ವೈದ್ಯರು ಸದಾಕಾಲ ನಿಗಾ ವಹಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೋವಿಡ್‌–19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಯು ಈ ಹಿಂದೆ ಯಾರೊಂದಿಗೆಲ್ಲ ಸಂಪರ್ಕ ಹೊಂದಿದ್ದರು ಹಾಗೂ ಯಾವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂಬುದನ್ನು ವೈದ್ಯರು ಮತ್ತು ಪೊಲೀಸರು ತಿಳಿಯಲು ನೆರವಾಗಲಿದೆ ಎಂದರು.

ಪ್ರತಿ ರೋಗಿಯ ಬಳಿ ಆ್ಯಪ್‌ ಅಳವಡಿಸಿರುವ ಮೊಬೈಲ್‌ ಇಡಲಾಗಿರುತ್ತದೆ. ಆ ರೋಗಿಯ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರ ಬಳಿ ಇರುವ ಮೊಬೈಲ್‌ಗೆ ಈ ಆ್ಯಪ್‌ ಮೂಲಕ ಸಂಪರ್ಕ ನೀಡಲಾಗಿರುತ್ತದೆ. ಇದರಿಂದ ರೋಗಿಯ ಆರೋಗ್ಯ ಸ್ಥಿತಿಗತಿ ತಿಳಿಯುವ ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ರಾಜ್ಯಮಟ್ಟದ ತಜ್ಞರ ತಂಡವನ್ನು ಸಂಪರ್ಕಿಸಿ ಸಲಹೆ ಪಡೆಯಲು ಸಹಾಯವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT