ಭಾನುವಾರ, ಜೂಲೈ 12, 2020
22 °C

ಕೋವಿಡ್‌ ತಣ್ಣಗಾದ ನಂತರ 2500 ವೈದ್ಯರ ನೇಮಕಕ್ಕೆ ತೀರ್ಮಾನ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ರಾಜ್ಯದಲ್ಲಿ 2500 ವೈದ್ಯರ ಹುದ್ದೆಗಳು ಖಾಲಿ ಇದ್ದು, ಕೋವಿಡ್‌–19 ತಣ್ಣಗಾದ ನಂತರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಇಲ್ಲಿ ಗುರುವಾರ ತಿಳಿಸಿದರು. 

‘ವೈದ್ಯರ ಹುದ್ದೆಗಳ ಭರ್ತಿ ನಿಟ್ಟಿನಲ್ಲಿ ಈಗಾಗಲೇ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಲಸಿಕೆ ಕಂಡುಹಿಡಿಯುವವರೆಗೆ ಕೋವಿಡ್‌ನೊಂದಿಗೆ ಪಯಣಿಸಲೇಬೇಕಾದ ಅನಿವಾರ್ಯ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಮುಂಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ  ಮಂಡ್ಯ ಜಿಲ್ಲೆಯ ವ್ಯಕ್ತಿಯನ್ನು ಊರಿಗೆ ಅಂಬುಲೆನ್ಸ್‌ನಲ್ಲಿ ತರಲಾಗಿತ್ತು. ಅಂಬುಲೆನ್ಸ್‌ನಲ್ಲಿ ಪತ್ನಿ, ಇಬ್ಬರು ಮಹಿಳೆಯರು, ಪುತ್ರ, ಇಬ್ಬರು ಮೊಮ್ಮಕ್ಕಳು, ಸಂಬಂಧಿಯೊಬ್ಬರು ಬಂದಿದ್ದಾರೆ. ಈ ಪೈಕಿ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯೂ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು