ಬುಧವಾರ, ನವೆಂಬರ್ 13, 2019
23 °C

ಆಯುಷ್ಮಾನ್ ಖುರಾನಾ ನಟನೆ ‘ಬಾಲಾ’ ಹಿಂದಿ ಸಿನಿಮಾ ಬಿಡುಗಡೆಗೆ ಕಾತರ

Published:
Updated:

ಆಯುಷ್ಮಾನ್‌ ಖುರಾನಾ ಅಭಿನಯದ ‘ಬಾಲಾ’ ಸಿನಿಮಾ ಬಾಲಿವುಡ್‌ನಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಮಾತ್ರ ಚಿತ್ರತಂಡ ಪದೇ ಪದೇ ಬದಲಿಸುತ್ತಿದೆ.

ಆಯುಷ್ಮಾನ್‌ ನಟಿಸಿರುವ ‘ದಮ್‌ ಲಗಾ ಕೆ ಐಸಾ’ ಸಿನಿಮಾ ಕೂಡ ನವೆಂಬರ್‌ 15ಕ್ಕೆ ಬಿಡುಗಡೆಯಾಗಲಿತ್ತು. ಈ ಕಾರಣಕ್ಕೆ ‘ಬಾಲಾ’ ಸಿನಿಮಾವನ್ನು ನವೆಂಬರ್‌ 20ಕ್ಕೆ ಬಿಡುಗಡೆ ಮಾಡುವುದಾಗಿ ಸಿನಿ ತಂಡ ಪ್ರಕಟಿಸಿತು.

ಆದರೆ ಸಿದ್ದಾರ್ಥ್‌ ಮಲ್ಹೋತ್ರ ಅಭಿನಯದ ‘ಮರ್ಜಾವಾನಿ’ ಕೂಡ ಅದೇ ದಿನ ಬಿಡುಗಡೆಯಾಗಲಿರುವ ಸುದ್ದಿ ಕೇಳಿ ಈಗ ಸಿನಿಮಾ ತಂಡ ಮತ್ತೆ ಗೊಂದಲಕ್ಕೆ ಒಳಗಾಗಿದೆ.

ಇದನ್ನೂ ಓದಿ...ಆಯುಷ್ಮಾನ್‌ ಸಂಭಾವನೆ ₹3.50 ಕೋಟಿ

‘ಡ್ರೀಮ್‌ ಗರ್ಲ್‌’ ಸಿನಿಮಾ ಯಶಸ್ವಿಯಾದ ಬಳಿಕ ಆಯುಷ್ಮಾನ್ ಅದೃಷ್ಟ ಬದಲಾಗಿದೆ. ಬಾಲಿವುಡ್‌ನಲ್ಲಿ ಅವರಿಗೆ ಅವಕಾಶಗಳು ತೆರೆದುಕೊಳ್ಳತೊಡಗಿವೆ. ‘ಬಾಲಾ’ ಸಿನಿಮಾದಲ್ಲಿಯೂ ಕಾಮಿಡಿ ಪಾತ್ರದಲ್ಲಿ ಪ್ರೇಕ್ಷಕರನ್ನು ನಗಿಸಲಿದ್ದಾರೆ.

ಅಮರ್‌ ಕೌಶಿಕ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ದನೇಶ್ ವಿಜನ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಭೂಮಿಪಡ್ನೇಕರ್‌, ಯಾಮಿ ಗೌತಮ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಚಿನ್ ಜಿಗಾರ್ ಅವರ ಸಂಗೀತ ಈ ಸಿನಿಮಾಕ್ಕಿದೆ. 

ಪ್ರತಿಕ್ರಿಯಿಸಿ (+)