ಮಂಗಳವಾರ, ಸೆಪ್ಟೆಂಬರ್ 17, 2019
24 °C

ಶಿವಳ್ಳಿ ನಿಧನಕ್ಕೆ ಮೃತ್ರಿ ಪಕ್ಷಗಳ ಕಿರುಕುಳವೇ ಕಾರಣ ಎಂದ ರಾಮುಲು ವಿರುದ್ಧ ದೂರು

Published:
Updated:

ಧಾರವಾಡ: ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ನಿಧನಕ್ಕೆ ಕಾಂಗ್ರೆಸ್‌–ಜೆಡಿಎಸ್ ಪಕ್ಷಗಳ ಕಿರುಕುಳವೇ ಕಾರಣ ಎಂಬ ಶಾಸಕ ಶ್ರೀರಾಮುಲು ಹೇಳಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲಿ ಗುರುವಾರ ಚುನಾವಣಾಧಿಕಾರಿ ಭೇಟಿ ಮಾಡಿ, ಶಿವಳ್ಳಿ ಅವರ ಸಾವಿಗೆ ಸಮ್ಮಿಶ್ರ ಸರ್ಕಾರವೇ ಕಾರಣ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹಿಂದೆ ಕಾಂಗ್ರೆಸ್‌ ವಿರುದ್ಧ ಮತದಾರರನ್ನು ಕೆರಳಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದ್ದಾರೆ.

ಸಾವನ್ನು ಮತ ಗಳಿಕೆಗೆ ಬಳಸಿಕೊಳ್ಳುತ್ತಿರುವುದು ನೋವಿನ ಸಂಗತಿ. ಹೇಳಿಕೆಗೆ ಕ್ಷಮೆಯಾಚಿಸುವುದು ಬಿಟ್ಟು ತಿರುಚಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದರಿಂದ ಸಾಕ್ಷಿ ಸಮೇತ ದೂರು ನೀಡಲಾಗಿದೆ ಎಂದು ನಂತರ ಸುದ್ದಿಗಾರರಿಗೆ ಉಗ್ರಪ್ಪ ಹೇಳಿದರು.

 

Post Comments (+)